ಬೆಂಗಳೂರು: ಬಿಜೆಪಿ ಹೈ ಕಮಾಂಡ್‌ನಿಂದ ನನಗೆ ಟಿಕೆಟ್ ಕೈ ತಪ್ಪಲು ಸಿ.ಟಿ. ರವಿಯೇ ಮುಖ್ಯ ಕಾರಣವಾಗಿದ್ದಾರೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಆಕ್ರೋಶಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಸಿಟಿ ರವಿ ವೈಯಕ್ತಿಕ ದ್ವೇಷದಿಂದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಸಿಟಿ ರವಿ ಪಕ್ಷಕ್ಕೆ ಒಳ್ಳೆದು ಮಾಡಲ್ಲ, ಬಿಜೆಪಿ ಮುಗಿಸುವವರೆಗೆ ಸಿ.ಟಿ. ರವಿ ವಿಶ್ರಾಂತಿ ಪಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪರನ್ನು ನಾನು ಕೇಳಿಕೊಳ್ತೇನೆ ನೀವು ಮೊಬೈಲ್ ಸ್ವಿಚ್ ಆಫ್ ಮಾಡಿ. ನೀವು ಸ್ವಿಚ್ ಆಫ್ ಮಾಡಿದರೆ ಬಿಜೆಪಿ 50 ಸೀಟ್ ಸಹ ಗೆಲ್ಲೋದಿಲ್ಲ ಎಂದು ತಿಳಿಸಿದ್ದಾರೆ.
ನಾನು ಯಾವುದಾದರೂ ಪಕ್ಷಕ್ಕೆ ಹೋಗುತ್ತೇನೆ. ನಾನೇನು ರಾಜಕೀಯದಲ್ಲಿ ಸನ್ಯಾಸಿ ಅಲ್ಲ. ನಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿ ನಿರ್ಧಾರ ಮಾಡುತ್ತೇನೆ. ಕಾಂಗ್ರೆಸ್‌ಗೆ ಹೋಗೋದಾ ? ಅಥ್ವಾ ಜೆಡಿಎಸ್ ಗೆ ಹೋಗೋದಾ ಅಂತಾ ಎಂದು ತಿಳಿಸಿದರು.
ಎಂಪಿ ಕುಮಾರಸ್ವಾಮಿಗೆ ಬಿಜೆಪಿಯ ಟಿಕೆಟ್ ಮಿಸ್ಸಾಗಿದ್ದಕ್ಕೆ ಜೆಡಿಎಸ್ ಕದ ತಟ್ಟಲು ರೆಡಿಯಾಗಿದ್ದಾರೆ ಅಂತಾ ತಿಳಿದು ಬಂದಿದೆ. ಕಮಲಪಡೆಯಿಂದ ದೂರವಾದ ಕುಮಾರಸ್ವಾಮಿ ಮುಂದಿನ ನಿರ್ಧಾರ ಏನು ಅನ್ನೋದು ಗೊತ್ತಾಗಬೇಕಿದೆ.