Monday, March 20, 2023
spot_img
- Advertisement -spot_img

ಪ್ರಜ್ವಲ್‌ ರೇವಣ್ಣಗೆ ಪ್ರಬುದ್ಧತೆ ಇಲ್ಲ, ನನ್ನನ್ನ ಏಕವಚನದಲ್ಲಿ ಮಾತನಾಡಿಸ್ತಾರೆ: ಶಾಸಕ ಪ್ರೀತಂ ಗೌಡ

ಹಾಸನ: ಚುನಾಯಿತ ಪ್ರತಿನಿಧಿಯನ್ನ ಸಂಸದ ಪ್ರಜ್ವಲ್ ರೇವಣ್ಣ ಏಕವಚನದಲ್ಲಿ ಮಾತನಾಡಿಸುತ್ತಾರೆ ಎಂದು ಹಾಸನದ ಶಾಸಕ ಪ್ರೀತಂ ಜೆ. ಗೌಡ ಗರಂ ಆಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ನನಗಿಂತ ಆರೇಳು ವರ್ಷ ಚಿಕ್ಕವರಾಗಿದ್ದು, ಅವರ ಸಂಸ್ಕಾರವನ್ನು ತೋರಿಸಿ ಕೊಡುತ್ತದೆ. ಪ್ರಜ್ವಲ್ ರೇವಣ್ಣ ಹಾಕಿರೋ ಸವಾಲು ಸ್ವೀಕಾರ ಮಾಡುತ್ತೇನೆ. ನಾನು ಮುಂದಿನ 2023ರ ಚುನಾವಣೆ ಗೆದ್ದು ತೋರಿಸುತ್ತೇನೆ.

ನನ್ನ ಮನೆ ಮತ್ತು ರಾಜಕೀಯ ಪಕ್ಷ ನನಗೆ ಒಂದು ಸಂಸ್ಕಾರ ಬೆಳೆಸಿಕೊಟ್ಟಿದೆ. ನಾನು 10 ವರ್ಷದ ಬಾಲಕನಿಗೂ ಕೂಡ ಏಕವಚನದಲ್ಲಿ ಹೋಗು, ಬಾ ಎಂದು ಹೇಳುವುದಿಲ್ಲ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುತ್ತೇವೆ. ಸಂಸದರು ಆ ರೀತಿ ಮಾತನಾಡಿದ್ದಾರೆ ಎಂದರೆ ಅವರ ಮನಸ್ಥಿತಿಯನ್ನು ಅದು ತೋರಿಸುತ್ತದೆ ಎಂದು ಕಿಡಿಕಾರಿದ್ರು. ಇನ್ನು ನೀವು ನನ್ನನ್ನು ಯಾವನೋ ಎಂದು ಕರೆದಿರುವುದು ಹಾಸನ ವಿಧಾನಸಭಾ ಕ್ಷೇತ್ರದ ಜನರನ್ನು ಕರೆದಂತೆ. ಏಕೆಂದ್ರೆ ನಾನು ಅವರ ಪ್ರತಿನಿಧಿ. ಆ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಕಲಿಯಲಿ. ಅವರಿಗೆ ಬಹಳಷ್ಟು ವಯಸ್ಸಿದೆ. ನಾನು ಅಪ್ಪಿ ತಪ್ಪಿ ಸಂಸದರನ್ನು ಏಕವಚನದಲ್ಲಿ ಮಾತನಾಡಿಸುವುದಿಲ್ಲ ಎಂದರು. ಪ್ರಜ್ವಲ್ ಅವರು ಸಂಸದರಾದ ಮೇಲೆ ಒಂದು ಬಾರಿಯೂ ಹಳ್ಳಿಗಳಿಗೆ ಹೋಗಲಿಲ್ಲ. ಈಗ ಅವರ ತಾಯಿಯನ್ನು ಇಲ್ಲಿ ಕಣಕ್ಕೆ ಇಳಿಸಲು ಮುಂದಾಗಿರುವುದರಿಂದ ಎಲ್ಲಾ ಗ್ರಾಮಗಳನ್ನ ಒಮ್ಮೆ ನೋಡಿಕೊಂಡು ಬರಲಿ ಎಂದು ಸಲಹೆ ನೀಡಿದ್ರು. ಪ್ರಜ್ವಲ್‌ ಅವರಿಗೆ ರಾಜಕೀಯದ ಪ್ರಬುದ್ಧತೆ ಇಲ್ಲ. ಪ್ರೀತಂ ಗೌಡರನ್ನು ಸೋಲಿಸಬಹುದು ಎಂದು ರೇವಣ್ಣನ ಕುಟುಂಬ ತೀರ್ಮಾನ ಮಾಡಿರಬಹುದು. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಜನ ಎಂದರೆ ನನ್ನ ಕುಟುಂಬ ಇದ್ದ ಹಾಗೆ. ಪ್ರೀತಂ ಗೌಡ ಶಾಸಕನಾಗಬೇಕು ಎಂಬುದನ್ನು ಅವರು ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Related Articles

- Advertisement -

Latest Articles