Thursday, September 28, 2023
spot_img
- Advertisement -spot_img

ʼಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ, ನಮ್ದು ಸೌಹಾರ್ದಯುತ ಭೇಟಿ ಅಷ್ಟೇ ́

ದಾವಣಗೆರೆ: ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ, ಸೌಹಾರ್ದಯುತ ಭೇಟಿ ಅಷ್ಟೇ ಎಂದು ದಾವಣಗೆರೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಟೀ ಕುಡಿಸಿ ಕಳುಹಿಸಿದ್ದೇನೆ. ಬೇರೆ ಏನೂ ಚರ್ಚೆ ಆಗಿಲ್ಲ, ವಿಶ್ ಮಾಡಿ ಹೋದ್ರು ಅಷ್ಟೇ ಇದಕ್ಕೆ ರಾಜಕೀಯ ಅರ್ಥ ಬೇಡ. ಪಕ್ಷದ ಬಗ್ಗೆ ಮಾತನಾಡಿದ್ರು, ಯಡಿಯೂರಪ್ಪ ಗೆ ಬಿಜೆಪಿ ಅನ್ಯಾಯ ಮಾಡಿತು ಅಂದ್ರು, ದಾವಣಗೆರೆಯಿಂದ ಲೋಕಸಭೆ ಬಿಜೆಪಿ ಆಕಾಂಕ್ಷಿ ಎಂದು ರೇಣುಕಾಚಾರ್ಯ ಹೇಳಿದ್ರು, ಚನ್ನಗಿರಿ ಶಾಸಕರ ಜೊತೆ ವೈಮನಸ್ಸಿಲ್ಲ ನನ್ನ ಫೋನ್ ಗೆ ಕರೆ ಮಾಡಿಲ್ಲ ಚನ್ನಗಿರಿ ಎಂಎಲ್ ಎ, ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾರೂ ಮಾತನಾಡಿಲ್ಲ , ಡಿಕೆ ಶಿವಕುಮಾರ್ ಕರೆ ನನಗೆ ಮಾಡಿಲ್ಲ, ಗೊತ್ತೂ ಇಲ್ಲ ಎಂದರು.

ಈ ಸಂಬಂಧ ನನಗೆ ಯಾರೂ ಮಾತನಾಡಿಲ್ಲ, ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿಲ್ಲ, ಬೇರೆ ಯಾರಾದರೂ ಕಾಂಗ್ರೆಸ್ ಗೆ ಬಂದರೆ ಸ್ವಾಗತಿಸುತ್ತೇವೆ, ತತ್ತ್ವ, ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ, ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ಯೋಚನೆ ಇಲ್ಲ, ಈ ಬಗ್ಗೆ ಚರ್ಚೆ ಆಗಿಲ್ಲ, ಕಾಂಗ್ರೆಸ್ ನಲ್ಲಿ ಬಹಳಷ್ಟು ಜನರಿದ್ದಾರೆ, ದೇವೇಂದ್ರಪ್ಪ ಕುಟುಂಬ ಆಹ್ವಾನ ಮಾಡಿತ್ತು , ಜಗಳೂರಿಗೆ ಪ್ರಭಾ ಮಲ್ಲಿಕಾರ್ಜುನ್ ಹೋಗಿದ್ದರು , ವರಮಹಾಲಕ್ಷ್ಮೀ ಪೂಜೆಗೆ ಆಹ್ವಾನದ ಮೇರೆಗೆ ಹೋಗಿದ್ದರು ಅಷ್ಟೇ ಎಂದು ತಿಳಿಸಿದರು.

ಬಿಜೆಪಿಯವರು ಮಾಡಿದ ಹೊಸ ಯೋಜನೆಗಳು ಯಾವೂದು ಇಲ್ಲ ಕುಂದುವಾಡ ಕೆರೆ ಹಾಳು ಮಾಡಿದ್ದಾರೆ , ಶೇಕಡಾ 40ರಷ್ಟು ಕಮೀಷನ್ ಪಡೆದು ಹಾಳು ಮಾಡಿದ್ದಾರೆ. ಬರಪೀಡಿತ ಪ್ರದೇಶಗಳ ಘೋಷಣೆಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ, ಕೇಂದ್ರ ಸರ್ಕಾರದ ಸಹಕಾರ ಬೇಕು ಎಂದು ಕಿಡಿಕಾರಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles