ಬೆಂಗಳೂರು : ಬಿಜೆಪಿ ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷ, ಇದು ಕುಟುಂಬಗಳ ಮೇಲೆ ಲೀಡರ್ ಗಳ ಮೇಲೆ ನಿಂತಿರುವ ಪಕ್ಷವಲ್ಲ. ಆದರೆ ಇವೆರಡರ ಮೇಲೆ ನಿಂತಿರೋದು ಕಾಂಗ್ರೆಸ್ ಪಕ್ಷದವರು, ನಮ್ಮ ಪಕ್ಷದಲ್ಲಿ ನಾಯಕರನ್ನು ಆಯ್ಕೆ ಮಾಡೋದೆ ಕಾರ್ಯಕರ್ತರು. ಎಲ್ಲಿವರೆಗೂ ಕಾರ್ಯಕರ್ತರು ಗಟ್ಟಿಯಾಗಿ ಬಿಜೆಪಿ ಜೊತೆ ಇರುತ್ತಾರೋ, ಅಲ್ಲಿಯವರೆಗೂ ನಮ್ಮ ಪಕ್ಷದ ಬೇರು ಯಾರಿಂದಲೂ ಅಲುಗಾಡಿಸಲು ಆಗುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪದ್ಮನಾಭ ನಗರ ಬಿಜೆಪಿಯ ಮಾಜಿ ಕಾರ್ಪೊರೇಟ್ ಗಳು ಕಾಂಗ್ರೆಸ್ ಸೇರ್ಪಡೆ ಕುರಿತಂತೆ ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವು ಕುಟುಂಬ ಹಾಗೂ ನಾಯಕರ ಮೇಲೆ ನಿಂತಿರುವ ಪಕ್ಷವಲ್ಲ. ಅದು ಕಾರ್ಯಕರ್ತರ ಶಕ್ತಿಯ ಮೇಲೆ ನಿಂತಿರುವ ಪಕ್ಷವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಮೋದಿ, ಕೆಸಿಆರ್ ಒಂದೇ ನಾಣ್ಯದ ಎರಡು ಮುಖಗಳು : ಜೈರಾಂ ರಮೇಶ್
ಬಿಜೆಪಿ 10 ಜನರು ಸೇರಿಕೊಂಡು ಮಾಡಿರುವ ಪಾರ್ಟಿ. ಇದನ್ನು ಯಾರಿಂದಲೂ ಅಲುಗಾಡಿಸೋಕೆ ಆಗುವುದಿಲ್ಲ. ಕಾರ್ಯಕರ್ತರು ಇರುವವರೆಗೂ ಪಕ್ಷ ಗಟ್ಟಿಯಾಗಿರುತ್ತದೆ ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ಸರ್ಕಾರಕ್ಕೆ ಧೈರ್ಯವಿದ್ದರೆ, ಜನರು ಹಾಗೂ ರೈತರ ಮೇಲೆ ಕಾಳಜಿ ಇದ್ದರೆ, ಕೂಡಲೇ ಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿಚಾರದಲ್ಲಿ ಸರ್ವಪಕ್ಷಗಳನ್ನು ಕೇಂದ್ರ ಸರ್ಕಾರದ ಬಳಿ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿರುವುದು ಒಂದು ಷಡ್ಯಂತ್ರ. ರಾಜ್ಯದಲ್ಲಿ ಮಳೆಯ ಕೊರತೆ ಹಿನ್ನೆಲೆ ಕಾವೇರಿ ನದಿಯಲ್ಲಿ ನೀರು ಸಂಗ್ರಹವಾಗಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಿದೆ. ರೈತರ ಬೆಳೆಗಳಿಗೆ ಹಾಗೂ ಕುಡಿಯಲು ನೀರಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡದೇ ಜನರಿಗೆ ಅನ್ಯಾಯ ಆಗಿದೆ ಎಂದು ದೂರಿದರು.
ತಮಿಳುನಾಡು ಯಾಕೆ ಸರ್ವಪಕ್ಷ ಕರೆದುಕೊಂಡು ಹೋಗುತ್ತಿಲ್ಲ? ಅವರು ಕೋರ್ಟ್ ಮತ್ತು ಪ್ರಾಧಿಕಾರದ ಮುಂದೆ ವಾದ ಮಾಡಿ ನೀರು ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.