Monday, December 4, 2023
spot_img
- Advertisement -spot_img

ಪ್ರೀತಿ ವಂಚನೆ ಆರೋಪ; ಸಂಸದ ದೇವೇಂದ್ರಪ್ಪ ಮಗನ ವಿರುದ್ದ ಎಫ್ಐಆರ್‌ ದಾಖಲು

ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ಮಗನ ವಿರುದ್ಧ ಪ್ರೀತಿ ಹೆಸರಲ್ಲಿ ವಂಚನೆಯ ಆರೋಪ ಕೇಳಿ ಬಂದಿದೆ. ವಂಚನೆಗೊಳಗಾದ ಯುವತಿ ಸಂಸದನ ಮಗನ ವಿರುದ್ಧ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಸದರ ಪುತ್ರ ರಂಗನಾಥ್, ಬೆಂಗಳೂರು ಮೂಲದ ಯುವತಿಯೊಬ್ಬರ ಸ್ನೇಹ ಮಾಡಿ, ಸ್ನೇಹ ಪ್ರೀತಿಗೆ ಜಾರಿ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ರಂಗನಾಥ್, ಒಂದೂವರೆ ವರ್ಷದ ಹಿಂದೆ ಸಂತ್ರಸ್ಥೆಗೆ ಪರಿಚಯವಾಗಿದ್ದರು. ಪಾರ್ಟಿ ಒಂದರಲ್ಲಿ ಸ್ನೇಹಿತರ ಮೂಲಕ 42 ವರ್ಷ ಪ್ರಾಯದ ರಂಗನಾಥ್ ಗೆ, 24 ವರ್ಷದ ಯುವತಿ ಪರಿಚಯವಾಗಿ ಪರಸ್ಪರ ಪ್ರೀತಿ ಮಾಡಲು ಶುರು ಮಾಡಿದ್ದರು. ಜೋಡಿಯಾಗಿ ಸುತ್ತಾಡಿಕೊಂಡಿದ್ದ ಸಂದರ್ಭ ಕ್ಲಿಕ್ಕಿಸಿಕೊಂಡಿದ್ದ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: UNESCO World Heritage Site Hampi: ವಿಶ್ವ ಪಾರಂಪರಿಕ ತಾಣದಲ್ಲಿಲ್ಲ ಕನಿಷ್ಠ ಮೂಲ ಸೌಕರ್ಯ

ಕಳೆದ ಜನವರಿಯಲ್ಲೆ ಮೈಸೂರಿನ ಹೋಟೇಲ್ ನಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾರೆ. ಲೈಂಗಿಕ ಸಂಪರ್ಕದ ನಂತರ ಯುವತಿ ಮದುವೆಯಾಗುವಂತೆ ರಂಗನಾಥ್ ಅವರನ್ನು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಂಸದರ ಮಗ ಸಂತ್ರಸ್ಥೆಯನ್ನು ಕಡೆಗಣಿಸಲು ಶುರು ಮಾಡಿದ್ದ. ಮದುವೆ ಆಗಲ್ಲ ಏನ್ ಮಾಡ್ಕೊತೀಯ ಮಾಡ್ಕೋ ಎಂದು ಹೇಳಿರುವುದಾಗಿ ಯುವತಿ ಆರೋಪಿಸಿದ್ದಾರೆ.

ಈ ಬೆಳವಣಿಗೆಯ ನಂತರ ವಿಚಾರವನ್ನು ಯುವತಿ ಸಂಸದ ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಕಾನೂನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಸಂಸದರು, ಯುವತಿಯ ಮಾತಿಗೆ ಬೆಲೆ ನೀಡದೆ ಸಂತ್ರಸ್ತೆಯ ವಿರುದ್ಧ ಗರಂ ಆಗಿದ್ದಾರೆ. ಇದರಿಂದ ಯಾರ ಬೆಂಬಲವು ಸಿಗದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದೇ ನನ್ನ ಆದ್ಯತೆ: ವಿಜಯೇಂದ್ರ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles