ಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಲು ಆಪ್ ಗೆಲ್ಲಬೇಕಿದೆ ಎಂದು ಆಪ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ 3 ಪಕ್ಷಗಳು 75 ವರ್ಷಗಳಿಂದ ಆಡಳಿತ ಮಾಡಿವೆ. ಮೂರು ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು , ಸುಳ್ಳುಗಾರ ರಿದ್ದು,ಇವರೆಲ್ಲರೂ ತೊಲಗಬೇಕಿದೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದರು
ಶೂನ್ಯ ಭ್ರಷ್ಟಾಚಾರ ಗ್ಯಾರಂಟಿ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಪ್ರತಿ ಮನೆಗೆ 300 ಯುನಿಟ್ 24/7 ಉಚಿತ ವಿದ್ಯುತ್, ಉಚಿತ ಉತ್ತಮ ಶಿಕ್ಷಣ, ಉಚಿತ ಬಸ್ ಸೌಲಭ್ಯ, ಉಚಿತ ಉನ್ನತ ಶಿಕ್ಷಣ, ಮೊಹಲಾ ಕ್ಲಿನಿಕ್, ಯುವಕರಿಗೆ ವರ್ಷ 2 ಲಕ್ಷ ಭತ್ಯೆ, ಮಹಿಳೆಯರಿಗೆ ಗ್ಯಾರಂಟಿ ಉದ್ಯೋಗ ಮೀಸಲು, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನು ರದ್ದುಗೊಳಿಸುವದು, ಬೆಂಬಲ ಬೆಲೆ, ಸಣ್ಣ ರೈತರಿಗೆ ಒಂದು ಬಾರಿ ಸಾಲ ಮನ್ನಾ, ಸರ್ಕಾರಿ ಉದ್ಯೋಗಕ್ಕೆ ಕನ್ನಡ ಕಡ್ಡಾಯ ಎಂಬ ಅಂಶ ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ತಿಳಿಸಿದರು.
ಜೆಡಿಎಸ್ ಬಿಜೆಪಿ ಕಾಂಗ್ರೆಸ್ ರಾಜ್ಯದಲ್ಲಿ ಭ್ರಷ್ಟಾಚಾರ ಕರಗತ ಮಾಡಿಕೊಂಡಿದ್ದು, ಒಂದು ಕಡೆ ಜೆಡಿಎಸ್ ಅನೈತಿಕವಾಗಿ ಅಧಿಕಾರ ಹಿಡಿಯುತ್ತಿದೆ. ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಇದು ಸಹ ನಮ್ಮ ಯೋಜನೆಗಳ ಕಾಪಿಯಾಗಿದೆ ಎಂದು ಆರೋಪಿದರು.