ನವದೆಹಲಿ: ನಿಮ್ಮ ಅಂಗಡಿಯು ದ್ವೇಷದಿಂದ ಕೂಡಿದೆ, ಆದರೆ ನನ್ನ ಅಂಗಡಿಯು ಪ್ರೀತಿಯದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ, ನಾನು ಈ ಯಾತ್ರೆಯನ್ನು ಏಕೆ ಮಾಡುತ್ತಿದ್ದೇನೆ ಎಂದು ಕೇಳುವ ಬಿಜೆಪಿ ನಾಯಕರಿಗೆ ಇದು ನನ್ನ ಪ್ರತಿಕ್ರಿಯೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಈಗ 100 ದಿನಗಳಿಂದ ನಡೆಯುತ್ತಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಈಗ ರಾಜಸ್ಥಾನ ಹೀಗೆ ಎಂಟು ರಾಜ್ಯಗಳಲ್ಲಿ ಸಂಚರಿಸಿದೆ. ಯಾತ್ರೆ ಶುಕ್ರವಾರದಂದು 100 ದಿನ ಪೂರೈಸಿದೆ.
ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ನಂತರ ನಾವು ಈಗ ರಾಜಸ್ಥಾನದಲ್ಲಿದ್ದೇವೆ. ನಾನು ದಾರಿಯುದ್ದಕ್ಕೂ ಹಲವಾರು ಆತ್ಮೀಯ ಸ್ನೇಹಿತರನ್ನು ಸಹ ಭೇಟಿಯಾಗುತ್ತಿದ್ದೇನೆ. ಸಾಮಾನ್ಯವಾಗಿ ಅವರು ಬಿಜೆಪಿ ಕಚೇರಿಯ ಮೇಲೆ ನಿಂತಿರುತ್ತಾರೆ. ನಾನು ಹಾದು ಹೋಗುವಾಗ ಅವರಿಗೆ ಕೈ ಬೀಸಿ ಅಭಿನಂದಿಸುತ್ತೇನೆ ಎಂದರು.