ಮ್ಯಾನ್ಮಾರ್: ಇಲ್ಲಿನ ಮಿಲಿಟರಿ ಆಡಳಿತಗಾರರು ಎಲ್ಲಾ ಸರ್ಕಾರಿ ಸಿಬ್ಬಂದಿ ಮತ್ತು ಮಿಲಿಟರಿ ಅನುಭವ ಹೊಂದಿರುವವರಿಗೆ ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗುವಂತೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಡುಕೋರರಿಂದ ಭಾರೀ ದಾಳಿ ವರದಿಯಾದ ಬೆನ್ನಲ್ಲೇ ಸೇನೆ ಈ ರೀತಿಯ ಸೂಚನೆ ನೀಡಿದೆ. ಮ್ಯಾನ್ಮಾರ್‌ನ ಸೇನೆಯು ಜನಾಂಗೀಯ ಅಲ್ಪಸಂಖ್ಯಾತರು ಮತ್ತು ಇತರ ಬಂಡಾಯಗಳ ವಿರುದ್ಧ ದಶಕಗಳಿಂದ ಹೋರಾಡಿದೆ ಆದರೆ 2021ರ ದಂಗೆಯು ಮಿಲಿಟರಿ-ವಿರೋಧಿ ಪಡೆಗಳ ನಡುವೆ ಅಭೂತಪೂರ್ವ ಸಮನ್ವಯವನ್ನು ತಂದಿದೆ, ಇದು ಸೈನ್ಯಕ್ಕೆ ದೊಡ್ಡ ಸವಾಲು ತಂದಿಟ್ಟಿದೆ.
ಇದನ್ನೂ ಓದಿ: Telangana Election 2023-ಕಣದಲ್ಲಿ 2,290 ಅಭ್ಯರ್ಥಿಗಳು, 608 ನಾಮಪತ್ರ ವಾಪಸ್!
ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಘಟಕಗಳನ್ನು ರಚಿಸುವಂತೆ ಜುಂಟಾ ಎಲ್ಲಾ ಸರ್ಕಾರಿ ಸಿಬ್ಬಂದಿ ಮತ್ತು ಮಾಜಿ ಮಿಲಿಟರಿ ಸಿಬ್ಬಂದಿಗೆ ಆದೇಶ ನೀಡಿದೆ ಎಂದು ರಾಜಧಾನಿ ನೈಪಿಟಾವ್‌ನಲ್ಲಿರುವ ಆಡಳಿತ ಮಂಡಳಿಯ ಕಾರ್ಯದರ್ಶಿ ಟಿನ್ ಮೌಂಗ್ ಸ್ವೆ ಹೇಳಿದ್ದಾರೆ.
“ಅಗತ್ಯವಿದ್ದಲ್ಲಿ, ಅಂತಹ ಘಟಕವು ನೈಸರ್ಗಿಕ ವಿಕೋಪಗಳು ಮತ್ತು ಭದ್ರತೆಗಾಗಿ ಹೊರಗೆ ಹೋಗಿ ಸೇವೆ ಸಲ್ಲಿಸಬೇಕಾಗಬಹುದು” ಎಂದು ಜುಂಟಾ ಕೌನ್ಸಿಲ್ ಆದೇಶದಲ್ಲಿ ತಿಳಿಸಿದೆ. ಮಧ್ಯ ಮ್ಯಾನ್ಮಾರ್‌ನಲ್ಲಿ ರಾಜಧಾನಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಯೋಜನೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಂದಿನ 5 ವರ್ಷ ಉಚಿತ ಪಡಿತರ ಯೋಜನೆ ಕೇಂದ್ರದ ಪ್ರಕಟಣೆಯಲ್ಲಿ ಏಕಿಲ್ಲ: ಜೈರಾಮ್ ರಮೇಶ್
ಮ್ಯಾನ್ಮಾರ್ ಬಿಕ್ಕಟ್ಟಿನಿಂದಾಗಿ ಅಲ್ಲಿನ 5 ಸಾವಿರಕ್ಕೂ ಹೆಚ್ಚು ಜನರು ಭಾರತದ ಮಿಜೋರಾಂಗೆ ವಲಸೆ ಬಂದಿದ್ದಾರೆ. ರಾಜ್ಯದ ಗಡಿಗಳಲ್ಲಿನ ಗ್ರಾಮಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ನಾಗರಿಕರ ದಂಗೆ ಮತ್ತು ಸೇನಾ ಕಾರ್ಯಾಚರಣೆಯಿಂದಾಗಿ ವಲಸೆ ಶುರುವಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.