Monday, December 4, 2023
spot_img
- Advertisement -spot_img

‘ರೈತರ ಹಿತಕ್ಕಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನ ಖಂಡಿಸ್ತೀವಿ’

ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸರ್ವ ಪಕ್ಷಗಳ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ನಮ್ಮ ಪಕ್ಷದಿಂದಲೂ ಮೂರು ನಾಲ್ಕು ಸಂಸದರು ಬಾಗಿಯಾಗಿ ಎಲ್ಲರೂ ಅವರವರ ಅಭಿಪ್ರಾಯ ತಿಳಿಸಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿಯು 12 ರಿಂದ ಮುಂದಿನ 15 ದಿನಗಳ ಕಾಲ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶ ಹೊರಡಿಸಿದೆ. ನಾಳೆ ಬಹುಶಃ ಸಮಿತಿಯ ಸಭೆಯಲ್ಲಿ ತೀರ್ಮಾನವನ್ನು ಹೋಲ್ಡ್ ಮಾಡುವ ಸಾದ್ಯತೆ ಇದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ 21ರಂದು ವಿಚಾರಣೆ ನಡೆಯಲಿದೆ. ತಮಿಳುನಾಡಿನವರು ಸುಪ್ರೀಂಕೊರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅಲ್ಲಿಯವರೆಗೆ ಈ ನಿಯಂತ್ರಣ ಸಮಿತಿಯ ಸೂಚನೆಯನ್ನು ಅನುಸರಿಸಬೇಕಾ? ಬೇಡ್ವಾ? ಎಂದು ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಉದ್ಯಮಿಗೆ ಬಹುಕೋಟಿ ವಂಚನೆ ಪ್ರಕರಣ : A3 ಆರೋಪಿ ಹಾಲಶ್ರೀ ಸಿಸಿಬಿ ವಶಕ್ಕೆ

ನಾವು ಮುಖ್ಯಮಂತ್ರಿಗಳಲ್ಲಿ ರಾಜ್ಯದ ಜನರ ಹಿತರಕ್ಷಣೆ ಮಾಡುವಂತೆ ತಿಳಿಸಿದ್ದೇವೆ. ನಮ್ಮ ಪಕ್ಷದವರು ಅದಕ್ಕೆ ಬದ್ದರಾಗಿದ್ದೇವೆ. ಆದರೆ 5 ಸಾವಿರ ಕ್ಯುಸೆಕ್ ನೀರು ಬಿಡುವ ತೀರ್ಮಾನ ಬೇಡ. ನಮಗೆ ನೀರಿಲ್ಲ ಬೆಳೆ ಒಣಗುತ್ತಿದೆ. ಎಷ್ಟೋ ಕಡೆ ನಾಟಿ ಕೆಲಸನೇ ಆಗಿಲ್ಲ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರಕ್ಕೆ ಪ್ರತಿ ದಿನ 1 ಸಾವಿರ ಕ್ಯುಸೆಕ್ ನೀರುಬೇಕು. ಮಳೆ ಬರುವ ಲಕ್ಷಣಗಲು ಕಾಣಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿಗೆ 12 ಟಿಎಂಸಿ ನೀರು ಬೇಕಿದೆ, ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನಕ್ಕೆ ಅನುಮೋದನೆ ನೀಡಬಾರದು. ಸುಪ್ರೀಂ ಕೊರ್ಟ್ ಗೆ ಮತ್ತೊಂದು ಅರ್ಜಿ ಹಾಕಿ ಎಂದು ಸ್ಪಷ್ಟ ಪಡಿಸಿದ್ದೇವೆ. ಅಂತಿಮ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಕೈಗೊಳುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ : ಉದ್ಯಮಿಗೆ ಬಹುಕೋಟಿ ವಂಚನೆ ಪ್ರಕರಣ : A3 ಆರೋಪಿ ಹಾಲಶ್ರೀ ಸಿಸಿಬಿ ವಶಕ್ಕೆ

ಕಾವೇರಿ ನೀರು ನಿಯಂತ್ರಣ ಸಮಿತಿಗೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಇದೆ. 2018 ರಲ್ಲಿ ಸುಪ್ರೀಂ ಕೊರ್ಟ್ ಅಂತಿಮ ತೀರ್ಪು ಕೊಟ್ಟಿದೆ. ಇಷ್ಟೆಲ್ಲ ಇರುವಾಗ ಈ ವಿಚಾರದಲ್ಲಿ ಪ್ರಧಾನಿಯವರನ್ನು ಎಳೆದು ತರುವುದು ಬೇಡ. ತಮಿಳುನಾಡಿನವರು ಸುಪ್ರೀಂ ಕೊರ್ಟ್ ಮೂಲಕವೇ ನ್ಯಾಯ ಕೇಳುತ್ತಿದ್ದಾರೆ. ಹಾಗೆ ನಾವು ನಮ್ಮ ವಾದವನ್ನು ಬಲವಾಗಿ ಮಂಡಿಸಿ ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಇದರಲ್ಲಿ ರಾಜಕೀಯ ಮಾಡುವುದು ಬೇಡ, ಕರ್ನಾಟಕದ ಹಿತರಕ್ಷಣೆ ವಿಚಾರಕ್ಕೆ ಬಂದರೆ ನಾವು ಇದ್ದೀವಿ. ಮೇಕೆದಾಟಿನಲ್ಲಿ ಇನ್ನೊಂದು ಡ್ಯಾಮ್ ಕಟ್ಟಬೇಕು ಎಂಬ ವಿಚಾರ ಬಂದರೆ ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇವೆ. ನಮಗೂ ಕೂಡ ಅದೆ ಆಸೆ ಇದೆ ನಮ್ಮ ರೈತರ ಹಿತರಕ್ಷಣೆಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಮಾನವನ್ನು ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles