Wednesday, March 22, 2023
spot_img
- Advertisement -spot_img

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮೈಸೂರು ಪೇಟ ಗಿಫ್ಟ್, ಗಮನ ಸೆಳೆದ ಬುಡಕಟ್ಟು ಜನಾಂಗದವರ ನೃತ್ಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2022 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಇಂದು ಅವರು ಮೈಸೂರಿಗೆ ಆಗಮಿಸುವ ಹಿನ್ನೆಲೆ ಬುಡಕಟ್ಟು ಸಮುದಾಯದವರು ಚಾಮುಂಡಿ ಬೆಟ್ಟದಲ್ಲಿ ನೃತ್ಯ ಮಾಡಿ ಗಮನಸೆಳೆದರು. ಅಷ್ಟೇ ಅಲ್ಲದೇ ರೇಷ್ಮೆ ಸೀರೆ, ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಕಾಡು ಜೇನನ್ನ ದ್ರೌಪದಿ ಮುರ್ಮು ಅವರಿಗೆ ಗಿಫ್ಟ್ ನೀಡಲು ತಂದಿದ್ದು, ಇದು ಗಮನಸೆಳೆದಿದೆ.

ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿದ್ದು, ಚಾಮುಂಡಿ ಬೆಟ್ಟದ ವೇದಿಕೆಯಲ್ಲಿ ನಾಡಹಬ್ಬ ದಸರಾಗೆ 9:45 ರಿಂದ 10.05 ನಿಮಿಷದ ವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ಆಸಿನರಾಗಿರುವ ನಾಡದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಇದಕ್ಕೂ ಮುನ್ನ ರಾಷ್ಟ್ರಪತಿಗಳು ಶಕ್ತಿ ದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದರು. ರಾಷ್ಟ್ರಪತಿಗಳಿಗೆ ಸಾಂಪ್ರದಾಯಿಕವಾಗಿ ಸ್ವಾಗತ ನೀಡಿದ ನಂತರ ಹುಣಸೂರು ಮತ್ತು ಕೊಡಗು ಭಾಗದಿಂದ ಬಂದಿದ್ದ ಬುಡಕಟ್ಟು ಜನರ ಜೊತೆಗೆ ಫೋಟೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರದ ಹಲವು ಸಚಿವರು, ರಾಜ್ಯದ ಸಚಿವರು ವೇದಿಕೆಯಲ್ಲಿದ್ದರು. ದಸರಾಗೆ ಚಾಲನೆ ನೀಡಿದ ಬಳಿಕ ಬುಡಕಟ್ಟು ಸಮುದಾಯದ ಆಯ್ದ 14 ಜನರೊಂದಿಗೆ ರಾಷ್ಟ್ರಪತಿಗಳ ಫೋಟೋ ಸೆಶನ್ ನಡೆಯಿತು. ಚಾಮುಂಡಿ ಬೆಟ್ಟದ ಆವರಣಲ್ಲಿ ಫೋಟೋ ಸೆಶನ್​ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ರಾಷ್ಟ್ರಪತಿಗಳು 10 ನಿಮಿಷಗಳ ಕಾಲಾವಕಾಶ ನೀಡಿದ್ದಾರೆ.

Related Articles

- Advertisement -

Latest Articles