Monday, March 20, 2023
spot_img
- Advertisement -spot_img

ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಮೋದಿಯವರಿಂದ ಉದ್ಘಾಟನೆ

ಮಂಡ್ಯ: 11 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಎಕ್ಸ್‌ಪ್ರೆಸ್ ಹೈವೇಯನ್ನು ಮಂಡ್ಯ ಬಳಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಬಹುನೀರೀಕ್ಷಿತ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಲೋಕಾರ್ಪಣೆಗೊಳಿಸಿದರು. ಬೆಂಗಳೂರು ಟು ಮೈಸೂರು ಸುಗಮ ಸಂಚಾರಕ್ಕಾಗಿ ನಿರ್ಮಾಣ ಆಗಿರುವ 118 ಕಿ.ಮೀ ಉದ್ದದ ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ ಆಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

ಈ ವೇಳೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಜೋಶಿ, ಗಡ್ಕರಿ, ಸಂಸದರಾದ ಸುಮಲತಾ, ಪ್ರತಾಪ್​ ಸಿಂಹ, ಸಚಿವರಾದ ಕೆ.ಗೋಪಾಲಯ್ಯ ಇದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರುವವರಿಗಾಗಿಯೇ ವಿಶೇಷವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಊಟವನ್ನು ಸಿದ್ಧಪಡಿಸಲು ಒಟ್ಟು 600 ಬಾಣಸಿಗರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರಿಗಾಗಿ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನವನ್ನು ಸಿದ್ಧಪಡಿಸಿದ್ದಾರೆ. 250 ಕ್ವಿಂಟಲ್ ಅಕ್ಕಿ 50 ಕ್ವಿಂಟಲ್ ತರಕಾರಿ ಬಳಕೆ ಮಾಡಲಾಗಿದೆ.

Related Articles

- Advertisement -

Latest Articles