Wednesday, March 22, 2023
spot_img
- Advertisement -spot_img

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ ಎಂದಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ,ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ರಾಜ್ಯದ 6 ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. 5 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದರು. ಜಮಖಂಡಿ, ತೇರದಾಳ, ಧಾರವಾಡ ನಗರ, ಶೃಂಗೇರಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರ ನಾನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಾವು ಸ್ಪರ್ಧಿಸಬಯಸುವ 5 ಕ್ಷೇತ್ರಗಳು ಯಾವುವು ಎಂಬುದನ್ನೂ ಘೋಷಿಸಿದ್ದಾರೆ.

ಎಸ್ಸಿ ಎಸ್ಟಿ ಮೀಸಲಾತಿ, ಮಹಿಳಾ ಮೀಸಲಾತಿ ಹಾಗೂ ಪದವೀಧರರಿಗೆ ಮೀಸಲಾತಿಯಂತೆ ಬಿಜೆಪಿಯಲ್ಲಿ ಹಿಂದುಗಳಿಗೂ ಮೀಸಲಾತಿ ನೀಡಬೇಕು ಎಂಬುದು ಮುತಾಲಿಕ್ ಆಗ್ರಹವಾಗಿದ್ದು, ಬಿಜೆಪಿ ಟಿಕೆಟ್​ ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ, ಮುತಾಲಿಕ್ ಬಿಜೆಪಿಯಿಂದ 25 ಟಿಕೆಟ್​ ಕೇಳಿದ್ದೇವೆ.

ಈ ಪೈಕಿ ಐವರು ಸ್ವಾಮೀಜಿಗಳಿಗೂ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಒಂದು ವೇಳೆ ಟಿಕೆಟ್​​ ಕೊಡದಿದ್ರೆ ನಾವೆಲ್ಲ ಪಕ್ಷೇತರವಾಗಿ ಸ್ಪರ್ಧೆ ಮಾಡ್ತೇವೆ. ಪಕ್ಷೇತರವಾಗಿ ಸ್ಪರ್ಧಿಸಿದರೂ ಹಿಂದುತ್ವದ ಅಜೆಂಡಾ ಮೂಲಕ ಗೆದ್ದು ಬರುತ್ತೇನೆ ಎಂದು ಹೇಳಿದ್ದಾರೆ.

Related Articles

- Advertisement -

Latest Articles