Wednesday, March 22, 2023
spot_img
- Advertisement -spot_img

ಸ್ವಾಭಿಮಾನಿ ಪರ್ವ ಸಮಾವೇಶದ ಮೂಲಕ ಶಕ್ತಿ ಪ್ರದರ್ಶಿಸಿದ ಎಲ್.ಆರ್.ಶಿವರಾಮೇಗೌಡ

ನಾಗಮಂಗಲ : 15 ವರ್ಷಗಳ ನಂತರ ಮತ್ತೆ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಾಜಿ ಸಂಸದ ಹಾಗೂ ಮಾಜಿ ಶಾಸಕ ಎಲ್‌.ಆರ್.ಶಿವರಾಮೇಗೌಡ ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.

ಇಂದು ಶ್ರೀ ಕಾವೇಟಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣ, ಕದಬಹಳ್ಳಿಯಲ್ಲಿ ನಡೆದ ಬಿಂಡಿಗನವಿಲೆ ಹೋಬಳಿಯ 5 ಪಂಚಾಯ್ತಿಗಳ ನಾಗಮಂಗಲ ತಾಲ್ಲೂಕಿನ ಎಲ್ ಆರ್ ಎಸ್ ಸ್ವಾಭಿಮಾನಿ ಪರ್ವ – 2023 ಕಾರ್ಯಕ್ರಮದಲ್ಲಿ ಅಬ್ಬರಿಸಿದ ಶಿವರಾಮೇಗೌಡರು ತನ್ನ ಎದುರಾಳಿಗಳಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

ಪಂಚರತ್ನ ಆರಂಭವಾಗಿದ್ದು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಆಗಲಿ, ಎಚ್ ಡಿ ದೇವೇಗೌಡರ ಬಗ್ಗೆ ಆಗಲಿ ಲಘುವಾಗಿ ಮಾತಾಡುವ ಕೆಲಸ ಮಾಡಲ್ಲ ಎಂದ ಮಾಜಿ ಸಂಸದ ಶಿವರಾಮೇಗೌಡ . ಕೇಂದ್ರದಲ್ಲಿ ಮೋದಿ ಹೇಳ್ತಾ ಇದ್ದಾರೆ ನನ್ನಿಂದ ಜನ ಸುಭೀಕ್ಷರಾಗಿದ್ದಾರೆ ಎಂದು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ನರೇಂದ್ರ ಮೋದಿ ಕನಸು ಕಾಣ್ತಾ ಇದ್ದಾರೆ. ಈ ದೇಶದ ಜನರನ್ನು ಬಕ್ರಾ ಮಾಡುತ್ತಿದ್ದಾರೆ ಆಕ್ರೋಶ ಹೊರಹಾಕಿದರು.

ಕರ್ನಾಟದಲ್ಲಿ ಒಕ್ಕಲಿಗ ಜನಾಂಗದವರನ್ನು ಗುರಿ ಮಾಡಿಕೊಂಡು ಕುಮಾರಣ್ಣನವರು ಪಂಚರತ್ನ ಹೆಸರಿನಲ್ಲಿ ರಾಜ್ಯದಲ್ಲಿ ಉದ್ದಗಲಕ್ಕೂ 123 ವಿಷನ್ ಇಟ್ಕೊಂಡು ಹೋರಾಡ್ತಿದ್ದಾರೆ. ನಾನು ಕೇಳ್ತೀನಿ ಮಗನಿಗೆ ಟಿಕೆಟ್ ಕೊಟ್ಟಂತಹ ಕುಮಾರಣ್ಣನವ್ರು ನೀವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಕೊಡುಗೆ ಏನು ? ಅಂತಾ ಕೇಳ್ತೀನಿ , ಬೆಂಗಳೂರಿನಲ್ಲಿ ನಾಗಮಂಗಲದವರು ಹೋಟೆಲ್‌ ನಿಂದ ಹಿಡಿದು ಆಟೋ ಓಡಿಸಿಕೊಂಡು ಕೆಲಸ ಮಾಡ್ತಾ ಇದ್ದಾರೆ .

ನಾಗಮಂಗಲದವರು ಕುಮಾರಣ್ಣನ ಕಣ್ಣಿಗೆ ಕಾಣ್ತಾ ಇಲ್ಲ , ನಾಗಮಂಗಲದಲ್ಲಿ 15 – 20 ಸಾವಿರ ಜನ ದುಡಿತಾ ಇದ್ದಾರೆ. 1999 ರಲ್ಲಿ ಎಮ್‌ ಎಲ್‌ ಎ ಗಿರಿ ಹೋಯಿತು, 25 ವರ್ಷ ಆಯಿತು, ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿಯಾಗಿ ಸೋತೆ , ಮೂರನೇ ಚುನಾವಣೆಯಲ್ಲಿ ಗೆಲ್ಲಲೂ ಸಜ್ಜಾದಾಗ ಕೈ ಪಕ್ಷದಿಂದ ಟಿಕೆಟ್ ಕೊಟ್ಟಿಲ್ಲ 2 ಸಾರಿ ಸೋತವರಿಗೆ ಟಿಕೆಟ್ ನಿರಾಕರಿಸಿದ್ರು ಆಗ ನನ್ನ ಅಭಿಮಾನಿಗಳು ನಿಲ್ಲಲೇಬೇಕು ಎಲೆಕ್ಷನ್ ಗೆ ಎಂದು ಹೇಳಿದಾಗ ಕಾಂಗ್ರೆಸ್ ನವರು ಹೇಳಿದ್ರು ಎಂಎಲ್‌ ಸಿ ಎಂಪಿಯಾಗಿ ಆಸೆ ಪಟ್ಟೆ ಅದಕ್ಕೆ ಯಾರೂ ಒಪ್ಪಿಲ್ಲ, ಹೀಗಿರುವಾಗ ಅಲ್ಲಿಂದ ಜನಗಳ ಸೇವೆ ಮಾಡಲು ಹೊರಟೆ, ಆಗ ಪಕ್ಷೇತರವಾಗಿಯೇ ಗೆದ್ದೆ, ಈಗಲೂ ನಾಗಮಂಗಲದ ಜನ ಪಕ್ಷೇತರವಾಗಿಯೇ ನಿಲ್ಲಿ ಎಂದು ಆದೇಶಿಸಿದ್ದಾರೆ, ಅದಕ್ಕಾಗಿ ಚುನಾವಣೆಗೆ ನಿಲ್ಲೋ ನಿರ್ಧಾರ ಮಾಡಿದ್ದೇನೆ.

ನಾಗಮಂಗಲಕ್ಕೆ ಬರೋ ಅನುದಾನ ಏನಾಗ್ತಿದೆ ಎಂದು ಯೋಚಿಸಬೇಕಿದೆ. ಚೆಲುವರಾಯಸ್ವಾಮಿ ಸುತ್ತ ಸುತ್ತಿದವರೆಲ್ಲ ಸುರೇಶ್ ಗೌಡ ಸುತ್ತ ಸುತ್ತುತ್ತಿದ್ದಾರೆ. ಆ ಜನರಿಂದ ಸುರೇಶ್ ಗೌಡ ಜಯಿಸೋಕೆ ಆಗಲ್ಲ , ಪಂಚರತ್ನ ಬಗ್ಗೆ ಅಲ್ಲ, ನಾಗಮಂಗಲದಲ್ಲಿ ಏನು ಕೆಲಸ ನಡೆದಿದೆ ಅನ್ನೊದನ್ನು ಗಮನಿಸಬೇಕಿದೆ.

ಹಾಗಾಗಿ ನಾಗಮಂಗಲದ ಮುಂದಿನ ಎಮ್ ಎಲ್‌ ಎ ಯಾರಾಗಬೇಕೆಂದು ಜನ ನಿರ್ಧಾರ ಮಾಡಬೇಕಿದೆ ಎಂದು ಮನವಿ ಮಾಡಿದರು. ಭಾಷಣದುದ್ದಕ್ಕು ಸ್ವಾಭಿಮಾನಿ ಕಾರ್ಯಕರ್ತರು ಹಾಗೂ ಸ್ವಾಭಿಮಾನದ ಕಹಳೆ ಊದಿದ ಶಿವರಾಮೇಗೌಡರು. 2019ರ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್‌ ನಡೆಸಿದ ತಂತ್ರಗಾರಿಕೆಯನ್ನೆ ನಡೆಸಿದಂತೆ ಕಾಣುತ್ತಿತ್ತು.

ಅಂತಿಮವಾಗಿ 10 ಸಾವಿರ ಜನರನ್ನ ಸ್ವತಂತ್ರವಾಗಿ ಸಭೆ ನಡೆಸಿ ತನ್ನ ಶಕ್ತಿ ಪ್ರದರ್ಶಿಸಿರುವ ಶಿವರಾಮೇಗೌಡರ ಮುಂದಿನ ನಡೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಕಾರ್ಯಕ್ರಮದ ಕೊನೆಯಲ್ಲಿ ಕಾಮಿಡಿ ಕಿಲಾಡಿಗಳು ತಂಡದಿಂದ ಮನರಂಜನೆ ನಡೆದಿದ್ದು, ಜನರು ಸಮಾವೇಶದಲ್ಲಿ ಸಂಸದರ ಪರ ಘೋಷಣೆ ಕೂಗಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

Related Articles

- Advertisement -

Latest Articles