Monday, December 11, 2023
spot_img
- Advertisement -spot_img

ಕಾರ್ಯಕರ್ತರನ್ನು ಗಡಿಪಾರು ಮಾಡಲು ನಿಮ್ಮ ಮಾನದಂಡವೇನು?: ನಳಿನ್ ಕುಮಾರ್ ಕಟೀಲ್

ಮಂಗಳೂರು: ಕ್ರಿಮಿನಲ್ ಮೊಕದ್ದಮೆಗಳಿರುವ ಕಾರಣ ದಕ್ಷಿಣ ಕನ್ನಡದಿಂದ 25 ರಿಂದ 30 ಜನರಿಗೆ ಬಹಿಷ್ಕಾರದ ನೋಟಿಸ್ ನೀಡಲಾಗಿದ್ದು, ಇದರ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರನ್ನು ಗಡಿಪಾರು ಮಾಡಲು ನಿಮ್ಮ ಮಾನದಂಡ ಏನು? ಹಾಗಾದ್ರೆ ನನ್ನನ್ನು ಗಡಿಪಾರು ಮಾಡಿ ಎಂದು ಹರಿಹಾಯ್ದರು. ಯಾಕೆ ಸುಮ್ಮನೆ ಕಾರ್ಯಕರ್ತರನ್ನು ಗಡಿಪಾರು ಮಾಡ್ತೀರಾ? ದ್ವೇಷ ರಾಜಕಾರಣ ನಡೆಯೋದಿಲ್ಲ, ಸುಳ್ಳು ಪ್ರಕರಣ ದಾಖಲಿಸೋದು, ಯಾವುದೇ ಅಪರಾಧಿ ಅಲ್ಲದೇ ಇದ್ರೂ ಅವರಿಗೆ ಗಡಿಪಾರು ಆದೇಶ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಚುನಾವಣೆ: ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನಮ್ಮ ಕಾರ್ಯಕರ್ತರನ್ನು ದಕ್ಷಿಣ ಕನ್ನಡ ಪ್ರದೇಶದಿಂದ ನಿಷೇಧಿಸುವಂತೆ ನೋಟಿಸ್ ಕಳುಹಿಸಲಾಗಿದೆ, ಅವರ ವಿರುದ್ಧ ಒಂದು ಪ್ರಕರಣವೂ ಇಲ್ಲ, ನಾವು ಇದನ್ನು ಖಂಡಿಸುತ್ತೇವೆ, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ, ನಾವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ ಯಾವುದೇ ಕಾರಣಕ್ಕೂ ಈ ರೀತಿಯ ಕೇಸ್‌ಗಳನ್ನು ಹಾಕಲು ಬಿಡುವುದಿಲ್ಲ. ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದರು.

ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿ.ಬಿ.ರಿಶ್ಯಂತ್ ಮಾತನಾಡಿ, “ಪಟ್ಟಿಯಲ್ಲಿ ಬಜರಂಗದಳದ ಕಾರ್ಯಕರ್ತರು ಮಾತ್ರವಲ್ಲ, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರರಿದ್ದಾರೆ. ಎಲ್ಲರೂ ರೌಡಿ ಶೀಟರ್‌ಗಳಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸರು ಕರೆಯುತ್ತಾರೆ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles