ಮಂಗಳೂರು: ಭಜರಂಗದಳ ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಬಜರಂಗದಳ, ಆರ್.ಎಸ್.ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ, . ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ನಿಷೇಧದ ಕೆಲಸ ಮಾಡಿದಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದಿಲ್ಲ ಎಂದು ತಿಳಿಸಿದರು. ರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಕೈ ಆಡಳಿತ ಮಾಡ್ತಿದೆ, ಇವರ ಗಲಾಟೆಯಿಂದ ಕೈ ಸರ್ಕಾರ ವಿಭಜನೆ ಆಗುತ್ತೆ ಎಂದು ಗುಡುಗಿದರು. ಇನ್ನೂ ಆರ್ ಎಸ್‍ಎಸ್ ನಿಷೇಧಿಸಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಆರ್ ಎಸ್‍ಎಸ್, ಬಜರಂಗದಳ ನಿಷೇಧದ ಬಗ್ಗೆ ಸಿಎಂ ಅವರು ತಮ್ಮ ಅಭಿಪ್ರಾಯ, ನಿಲುವು ಸ್ಪಷ್ಟಪಡಿಸಲಿ. ಸಚಿವರ ಹೇಳಿಕೆಗೆ ಸಿಎಂ ಬೆಂಬಲ ಇದೆಯಾ ಅಂತ ಜನತೆಗೆ ತಿಳಿಸಲಿ. ಆರ್ ಎಸ್‍ಎಸ್ ನಿಷೇಧಿಸಲು ಯಾರಿಗೂ ಸಾಧ್ಯವಿಲ್ಲ. ಇಂತಹ ಸಾಹಸಕ್ಕೆ ಕೈಹಾಕಿದವರನ್ನು ಜನ ಈಗಾಗಲೇ ಮನೆಗೆ ಕಳಿಸಿದ್ದಾರೆ ಎಂದು ಎಚ್ಚರಿಸಿದರು. ನೂತನ ಸರ್ಕಾರ ರಚನೆಯಾಗಿದ್ದು, ರಾಜ್ಯದ ಅಭಿವೃದ್ಧಿ ಬದಲು ದ್ವೇಷದ ರಾಜಕಾರಣವೇ ಈ ಸರ್ಕಾರಕ್ಕೆ ಪ್ರಮುಖವಾಗಿದೆ ಎಂದು ಕಿಡಿಕಾರಿದ್ದರು.