ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಸ್ಥಾನ ಗೆಲ್ತೇವೆ.ಅಯೋಧ್ಯೆ ಮಂದಿರಕ್ಕಾಗಿ ಸಂಘದ ಪ್ರಚಾರಕನಾಗಿ ಹೊರಟೆ ಆಗ ರಾಮನ ಪಾದದ ಮೇಲಾಣೆ, ಮಂದಿರ ಅಲ್ಲೇ ಕಟ್ಟುವೆವು ಅಂದೆವು. ಇವತ್ತು ಪ್ರಧಾನಿ ಮೋದಿಯವರು ಅಲ್ಲೇ ರಾಮನ ಮಂದಿರ ಕಟ್ತಿದ್ದಾರೆ.ಬೂತ್ ವಿಜಯದ ಮೂಲಕ ರಾಜ್ಯದ ವಿಜಯದ ಸಂಕಲ್ಪ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಬೂತ್ ವಿಜಯ ಅಭಿಯಾನ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲೆಗಳಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಶುರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು 100 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯ, ಹಾಸನ ಅನ್ನೋ ಮಾತಿತ್ತು ,ಆದರೆ ಮಂಡ್ಯದಲ್ಲಿ ಅಮಿತ್ ಶಾ ಪ್ರವಾಸದ ಮೂಲಕ ಬಿಜೆಪಿ ಚೈತನ್ಯ ಹೆಚ್ಚಾಗಿದೆ.ಬಿಜೆಪಿ ಇಂದು ಸರ್ವವ್ಯಾಪಿಯಾಗಿದ್ದು, 150 ಸ್ಥಾನ ಪಡೆಯುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಹತ್ತು ದಿನಗಳ ಕಾಲದಲ್ಲಿ ನಮ್ಮ ಬೂತ್ ಟಾರ್ಗೆಟ್ ಇದೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಎಲ್ಲರೂ ಮುಖ್ಯಮಂತ್ರಿ ಶರ್ಟ್ ಹೊಲಿಸಿದ್ದಾರೆ.ದ.ಕ ಜಿಲ್ಲೆಯಲ್ಲೂ ಮೂರು ಜನ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ. ಯು.ಟಿ.ಖಾದರ್, ರಮಾನಾಥ್ ರೈ, ಲೋಬೋ ಸಚಿವರಾಗಲು ಶರ್ಟ್ ಹೊಲಿಸಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಗೆ ಬೂತ್ ಗೆ ಒಬ್ಬನೇ ಒಬ್ಬ ಹಿಂದೂ ಸಿಗಲ್ಲಇವತ್ತು ನಡೀತಾ ಇರೋದು ಬೂತ್ ವಿಜಯ ಅಭಿಯಾನ,ಇವತ್ತಿನಿಂದ ನಮ್ಮ ಯಾತ್ರೆ ಆರಂಭ, ಜಿಲ್ಲೆಯ ಮನೆಮನೆಗಳಲ್ಲೂ ಧ್ವಜ ಹಾರಬೇಕು ಎಂದರು.