ಬೆಂಗಳೂರು: ಸಿದ್ದರಾಮಯ್ಯನವರಿಗೆ ಸ್ಪರ್ಧಿಸಲು ಕ್ಷೇತ್ರ ಇಲ್ಲದಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿ, ಸ್ಪರ್ಧಿಸಲು ಕ್ಷೇತ್ರ ಇಲ್ಲದಿರುವುದು ಕೇವಲ ಸಿದ್ದರಾಮಯ್ಯನವರಿಗೆ ಮಾತ್ರವಲ್ಲ, ಕಾಂಗ್ರೆಸ್ ನ ಹಲವರಿಗೆ ಇದೇ ಸ್ಥಿತಿ ಎದುರಾಗಿದೆ ಎಂದರು. ಮುಂದಿನ ಸಿಎಂ ಎಂದು ಹೇಳಿಕೆ ನೀಡುತ್ತಾ ತಿರುಗಾಡುವ ಸಿದ್ದರಾಮಯ್ಯರನ್ನು ನೋಡಿದ್ರೆ ಅಯ್ಯೋ ಅನ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಾಡಿಗೆ ಅಲೆಯುವ ಸ್ಥಿತಿ ನಿರ್ಮಾಣ ಆಗಲಿದ್ದು, ಈಗಿರುವ ಸ್ಥಾನ ಕೂಡಾ ಕಳೆದುಕೊಳ್ಳುವುದು ಗ್ಯಾರಂಟಿ , ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿರುದ್ಯೋಗಿ ಆಗಲಿದ್ದಾರೆ. ಅವರಿಗೆ ಚುನಾವಣೆ ನಿಲ್ಲಲು ಕ್ಷೇತ್ರ ಸಿಗುತ್ತಿಲ್ಲ, ಹೀಗಿರುವಾಗ ಅವರ ಪಕ್ಷ ಅಧಿಕಾರಕ್ಕೆ ಬರೋದಾದ್ರೂ ಹೇಗೆ? ಕೋಲಾರದಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ನವರೇ ಅವರನ್ನು ಸೋಲಿಸುತ್ತಾರೆ. ಇನ್ನುಳಿದ ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾವು ಸೋಲಿಸುತ್ತೇವೆ ಎಂದು ಹೇಳಿದರು.