Sunday, March 26, 2023
spot_img
- Advertisement -spot_img

ಸಚಿವ ನಾರಾಯಣ ಗೌಡ ಪಕ್ಷ ಬಿಡಬಹುದು : ಸಚಿವ ಬಿ.ಸಿ.ಪಾಟೀಲ್

ಗದಗ: ನನಗೆ ತಿಳಿದಮಟ್ಟಿಗೆ ಸಚಿವ ನಾರಾಯಣ ಗೌಡ ಪಕ್ಷ ಬಿಡಬಹುದು ಎಂದು ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.

ಮಾಧ್ಯಮದವರೊಂದಿಗೆ ಮಾತನಾಡಿ, ನಾರಾಯಣ ಗೌಡರ ಕಾಂಗ್ರೆಸ್ ಸೇರ್ಪಡೆ ವಿಷಯ ಅವರ ವೈಯಕ್ತಿಕ. ವಲಸಿಗ ಶಾಸಕರ ಪೈಕಿ ಅವರು ಕಾಂಗ್ರೆಸ್‌ಗೆ ಹೋದರೆ ಹೋಗಬಹುದು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಹಳ‌ ಜನ ಬಿಜೆಪಿಗೆ ಬರುವವರಿದ್ದಾರೆ. ಇಬ್ಬರು ಹೋದರೆ 20 ಜನ ಬರುತ್ತಾರೆ. ಆದರೆ, ಸಿದ್ದರಾಮಯ್ಯ ಬಿಜೆಪಿಗೆ ಬರುತ್ತೇನೆ ಅಂದರೆ ಕರೆದುಕೊಳ್ಳಲ್ಲ” ಎಂದು ವ್ಯಂಗ್ಯವಾಡಿದರು.

ಸಂವಿಧಾನವನ್ನು ಪ್ರೀತಿ‌ಸಬೇಕು. ಹಾಗೆ ಮಾಡಿದ್ದರಿಂದಲೇ ಮತದಾರರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಆಶೀರ್ವದಿಸಿದ್ದಾರೆ ಎಂದು ಪಕ್ಷವನ್ನು ಸಮರ್ಥಿಸಿಕೊಂಡರು.ಕಾಂಗ್ರೆಸ್ ಪಕ್ಷದವರದ್ದು ಓಲೈಕೆ ಪದ್ಧತಿ. ನಾವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ರೂ ಮುಸ್ಲಿಮರಿಗೆ ಮೀಸಲಿಡುವುದಾಗಿ ಹೇಳಿದ್ದರು. ಆದರೆ, ಇದು ಹಿಂದೂ ರಾಷ್ಟ್ರ. ಹಿಂದೂಗಳಿಗೆ ಇಷ್ಟು ಹಣ ಇಡುವುದಾಗಿ ಏಕೆ ಹೇಳಲಿಲ್ಲ” ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಕೆಲಸವಿಲ್ಲ. ಅವರು ಸದ್ಯ ನಿರುದ್ಯೋಗಿಗಳು. ಹೀಗಾಗಿ ಹಾದಿ-ಬೀದಿ ರಂಪ‌ ಮಾಡಿಕೊಂಡು ಸ್ಟ್ರೈಕ್ ಮಾಡುತ್ತಾ, ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬರುವುದೇ ಗ್ಯಾರಂಟಿ ಇಲ್ಲ. ಇನ್ನು ಆ ಗ್ಯಾರಂಟಿ, ಈ ಗ್ಯಾರಂಟಿ ಅಂತ ಪುಕ್ಕಟೆ ಗ್ಯಾರಂಟಿ ಕೊಡುತ್ತಿದ್ದಾರೆ” ಎಂದು ಸಚಿವರು ವ್ಯಂಗ್ಯವಾಡಿದರು.

Related Articles

- Advertisement -

Latest Articles