ಹೈದ್ರಾಬಾದ್ : ಆರ್ ಆರ್ ಆರ್ ಸಿನಿಮಾದ ನಾಟು, ನಾಟು ಸಾಂಗ್ 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದು, ಪ್ರಧಾನಿ ಮೋದಿಯವರು ಚಿತ್ರತಂಡದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ, ಜಾಗತಿಕ ಮಟ್ಟದಲ್ಲಿ ನಾಟು ನಾಟು ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಹಾಡು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಗೀತರಚನಕಾರ ಚಂದ್ರಬೋಸ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಸಂತಸ ಮತ್ತು ಹೆಮ್ಮೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಆಸ್ಕರ್ ಪ್ರಶಸ್ತಿಯ ಗರಿ ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ. ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಆರ್ಆರ್ಆರ್ ಚಿತ್ರ ಗೆಲ್ಲಬೇಕು, ಪ್ರತಿ ಭಾರತೀಯ ಹೆಮ್ಮೆ ಪಡಬೇಕು. ಈ ಆಸೆ ಈಡೇರಿದೆ’ ಎಂದು ಕೀರವಾಣಿ ಹೇಳಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಸಹ ತುಂಬಾ ಖುಷಿಯಾಗಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಕೀರವಾಣಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 90ರ ದಶಕದಿಂದ ಕೀರವಾಣಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ಅವಾರ್ಡ್ ಗೆದ್ದ ನಂತರ ಕೀರವಾಣಿ ಖ್ಯಾತಿ ಹೆಚ್ಚಿದೆ.