Friday, September 29, 2023
spot_img
- Advertisement -spot_img

ಬ್ರಿಕ್ಸ್‌ಗೆ ಹೊಸ ಸದಸ್ಯರ ಸೇರಿಸಲು ಭಾರತ ಉತ್ಸುಕ; ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ/ಜೋಹಾನ್ಸ್‌ಬರ್ಗ್‌: ಬ್ರಿಕ್ಸ್‌ಗೆ ಹೊಸ ಸದಸ್ಯರ ಸೇರಿಸಲು ಭಾರತ ಉತ್ಸುಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.

‘ಈ 3 ದಿನಗಳ ಸಭೆಯಲ್ಲಿ ಬಹಳಷ್ಟು ಸಕಾರಾತ್ಮಕ ಫಲಿತಾಂಶಗಳು ಹೊರಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬ್ರಿಕ್ಸ್‌ನ ಸದಸ್ಯರ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ’ ಎಂದಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾತನಾಡಿ ಬ್ರಿಕ್ಸ್ ಸದಸ್ಯರ ಬಲಕ್ಕೆ ಇನ್ನೂ 6 ರಾಷ್ಟ್ರಗಳು ಸೇರಲು ಉತ್ಸುಕವಾಗಿವೆ ಎಂದಿದ್ದರು.

ಇದನ್ನೂ ಓದಿ: ಭಾರತದಲ್ಲಿ ತಯಾರಿಕಾ ಘಟಕ ಹೆಚ್ಚಿಸಲು ಆಪಲ್ ಸಜ್ಜು; ಅಧಿಕಾರಿಗಳೊಂದಿಗೆ ಸಭೆ!

‘ಬ್ರಿಕ್ಸ್‌ ಸದಸ್ಯರ ವಿಸ್ತರಣೆ ಮತ್ತು ಆಧುನೀಕರಣವು ವಿಶ್ವದ ಸಂಸ್ಥೆಗಳು ಬದಲಾಗುತ್ತಿರುವ ಸಮಯಕ್ಕೆ ಒಗ್ಗಿಕೊಳ್ಳಬೇಕಾದ ಸೂಚನೆಯಾಗಿದೆ. ಇದಕ್ಕೆ ಭಾರತ ಎಂದಿಗೂ ಬೆಂಬಲ ನೀಡಲಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಬಳಿಕ ಮಾತು ಮುಂದುವರೆಸಿದ ಪ್ರಧಾನಿ ಚಂದ್ರಯಾನ್ ಯೋಜನೆ ಕುರಿತು ಪ್ರಸ್ತಾಪಿಸಿರು. ‘ನಿನ್ನೆ ಭಾರತದ ಚಂದ್ರಯಾನ್-3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ ಸಮುದಾಯಕ್ಕೂ ದೊಡ್ಡ ಸಾಧನೆಯಾಗಿದೆ. ಇದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ಭಾರತೀಯ ವಿಜ್ಞಾನಿಗಳ ಪರವಾಗಿ ಧನ್ಯವಾದ ಅಪರ್ಪಿಸುತ್ತೇನೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles