Tuesday, November 28, 2023
spot_img
- Advertisement -spot_img

ನರೇಂದ್ರ ಮೋದಿಯವರಿಗೆ ಹೂವಿನ ಮಳೆ ಸುರಿಸಿ ಅಭಿಮಾನಿಗಳಿಂದ ಸ್ವಾಗತ

ಮಂಡ್ಯ: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಆಗಮಿಸಿದ ನರೇಂದ್ರ ಮೋದಿಯವರು ಮಂಡ್ಯಕ್ಕೆ ಬಂದಿಳಿದಿದ್ದಾರೆ. ಮೋದಿಯವರನ್ನು ಅಭಿಮಾನಿಗಳು, ಕಾರ್ಯಕರ್ತರು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ನರೇಂದ್ರ ಮೋದಿಯವರಿಗೆ ಹೂವಿನ ಮಳೆ ಸುರಿಸಿದ್ದಾರೆ. ಮೋದಿ ರೋಡ್ ಶೋನಲ್ಲಿ ಜನ ಸಾಗರವೇ ಹರಿದು ಬಂದಿದೆ. ಜಾನಪದ ಕಲಾವಿದರು, ವೀರಗಾಸೆ ಮೂಲಕ ಸರ್ವಿಸ್ ರಸ್ತೆಯಲ್ಲಿ ಕಲಾವಿದರು ಜನರನ್ನು ರಂಜಿಸುತ್ತಿದ್ದಾರೆ. ಜನರತ್ತ ಮೊದಿ ಕೈ ಬೀಸಿದರು.

ಮಂಡ್ಯದ ಹೆದ್ದಾರಿಯಲ್ಲಿ ಕೇಸರಿ ಬಣ್ಣದ ಬಾವುಟಗಳು, ಫ್ಲೆಕ್ಸ್ ಗಳು ಬೃಹತ್ ಕಟೌಟ್ ಗಳು ರಾರಾಜಿಸ್ತಿವೆ, ಗೆಜ್ಜಲಗೆರೆಯಲ್ಲಿ ಸಾರ್ವಜನಿಕ ಸಭೆಗೋಸ್ಕರ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೀಕ್ಷಕರ ಅನೂಕೂಲಕ್ಕೆ ಬೃಹತ್ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ 50 ಮೀ ಕಾಲ್ನಡಿಗೆ, ವೀಕ್ಷಣೆ ಬಳಿಕ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ, ಮಧ್ಯಾಹ್ನ 12.ಕ್ಕೆ ಗೆಜ್ಜಲಗೆರೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಮಂಡ್ಯ ಕೇಸರಿಮಯವಾಗಿದ್ದು, ಕೇಸರಿ ಬಾವುಟ ಕಾಣಿಸ್ತಿದೆ.

Related Articles

- Advertisement -spot_img

Latest Articles