ನವದೆಹಲಿ: ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸವಾಲುಗಳನ್ನು ಎದುರಿಸಲು ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಕ್ಷದ 44 ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿ, ಇಂದು ಹನುಮಾನ್ ಜಯಂತಿ ಮತ್ತು ಪಕ್ಷದ ಸಂಸ್ಥಾಪನಾ ದಿನವಾಗಿದೆ. ಹನುಮನಂತೆ ನಿಸ್ವಾರ್ಥ ಸೇವೆಯನ್ನು ಪಕ್ಷ ಮಾಡುತ್ತದೆ ಎಂದರು. ವಿರೋಧ ಪಕ್ಷಗಳು ದೊಡ್ಡದಾಗಿ ಯೋಚಿಸಲು ಸಾಧ್ಯವಿಲ್ಲ. ಸಣ್ಣತನದಿಂದಲೇ ಅವರು ತೃಪ್ತರಾಗಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಸಂಸ್ಥಾಪನಾ ದಿನದ ಶುಭಾಶಯ ಕೋರಿದ್ದಾರೆ.
ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಬಿಜೆಪಿ ಧ್ವಜಾರೋಹಣ ನೆರವೇರಿಸಲಾಯಿತು, ರಾಷ್ಟ್ರೀಯತೆಯ ಚಿಂತನೆಗಳೊಂದಿಗೆ ಜನ್ಮ ತಾಳಿದ ನಮ್ಮ ಪಕ್ಷಕ್ಕೆ ಇಂದು 44ನೇ ಸ್ಥಾಪನಾ ದಿವಸದ ಸಂಭ್ರಮ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.