ನವದೆಹಲಿ: ಮರ್ ಜಾ ಮೋದಿ ಮರ್ ಜಾ ಮೋದಿ ಎಂದು ಕೆಲವರು ನನಗೆ ಸಮಾಧಿ ತೊಡಲು ಯೋಚಿಸ್ತಿದ್ರೆ , ದೇಶದ ಜನತೆ ಮತ್ ಜಾ ಮೋದಿ…ಮತ್ ಜಾ ಮೋದಿ ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಪಕ್ಷವು ದೇಶ ಮತ್ತು ದೇಶದ ಜನತೆಗೆ ಮೊದಲ ಪ್ರಾಶಸ್ತ್ಯ ನೀಡುತ್ತದೆ, ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಜನರಿಗೆ ನಾನು ನಮ್ರತೆಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಬಾರಿ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಜೊತೆಗೆ ಈ ಮೂರು ರಾಜ್ಯಗಳ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಈ ಫಲಿತಾಂಶ ಎಲ್ಲಾ ಬಿಜೆಪಿ ಕಾರ್ಯಕರ್ತರ ಶ್ರಮದ ಫಲ. ಈಶಾನ್ಯದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ಅವರಿಗೆ ವಿಶೇಷ ಧನ್ಯವಾದ ಸಲ್ಲುತ್ತದೆ ಎಂದರು. ಈಶಾನ್ಯ ರಾಜ್ಯಗಳು ದೆಹಲಿಯಿಂದ ಅಥವಾ ನಮ್ಮ ಹೃದಯದಿಂದ ಹೆಚ್ಚು ದೂರದಲ್ಲಿಲ್ಲ. ಅವಕಾಶ ಸಿಕ್ಕಲ್ಲೆಲ್ಲ ಕಮಲ ಅರಳುತ್ತಲೇ ಇರುತ್ತದೆ” ಎಂದರು.
ಈ ಚುನಾವಣಾ ಫಲಿತಾಂಶ ಇಡೀ ದೇಶಕ್ಕೆ ಮತ್ತು ಜಗತ್ತಿಗೆ ಅನೇಕ ಸಂದೇಶ ನೀಡಿದೆ. ಯಾವಾಗಲೂ ಎಲೆಕ್ಷನ್ ರಿಸಲ್ಟ್ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಿಂಬಿಸುತ್ತವೆ. ಭಾರತದಲ್ಲಿ ಬಿಜೆಪಿ ಹೊಸ ಮಾದರಿಯ, ಅಭಿವೃದ್ಧಿ ಆಧಾರಿತ ರಾಜಕೀಯ ಮಾಡುತ್ತಿದೆ. ಇದನ್ನು ಜನತೆ ಸರ್ವಾನುಮತದಿಂದ ಸ್ವೀಕರಿಸಿದ್ದಾರೆ ಎಂದು ಹೇಳಿದರು.