ನವದೆಹಲಿ/ರೋಮ್: ಉಸಿರಾಟದ ತೊಂದರೆಯಿಂದ ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪೋಪ್ ಫ್ರಾನ್ಸಿಸ್ ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಪೋಪ್ ಫ್ರಾನ್ಸಿಸ್ ಬ್ರಾಂಕೈಟಿಸ್ ನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೋಮ್‌ನಲ್ಲಿ ವೈದ್ಯರು ಹೇಳಿದ್ದರು.ಮುಂದಿನ ಕೆಲವು ದಿನಗಳಲ್ಲಿ ಪೋಪ್ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಪೋಪ್ ಫ್ರಾನ್ಸಿಸ್ ತಮ್ಮ ಅಧಿಕೃತ ಟ್ವಿಟರ್ನಲ್ಲಿ ವಿಶ್ವ ನಾಯಕರುಗಳ ಹಾರೈಕೆಗಾಗಿ ಧನ್ಯವಾದ ತಿಳಿಸಿದ್ದಾರೆ. “ನಿಮ್ಮ ಪ್ರಾರ್ಥನೆಗಾಗಿ ನಾನು ಕೃತಜ್ಞತೆ ವ್ಯಕ್ತಪಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಮುಂದಿನ ಈಸ್ಟರ್ ವಾರಾಂತ್ಯಕ್ಕೆ ಮುಂಚಿತವಾಗಿ ಅನೇಕ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಈ ವಾರಾಂತ್ಯದಲ್ಲಿ ಪಾಮ್ ಭಾನುವಾರ ಪ್ರಾರ್ಥನೆ, ಬಳಿಕ ಮುಂದಿನ ವಾರ ಪವಿತ್ರ ವಾರ ಮತ್ತು ಈಸ್ಟರ್ ಆಚರಣೆ ನಿಗದಿಪಡಿಸಲಾಗಿದೆ.