ನಂಜನಗೂಡು: ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ಕಾಂಗ್ರೆಸ್ ಯೋಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ನಂಜನಗೂಡಿನಲ್ಲಿ ಪ್ರಚಾರ ಭಾಷಣ ಮಾಡಿದ ಮೋದಿ, ಕೈ ಪಕ್ಷ , ಜೆಡಿಎಸ್ ಇದ್ದಾಗ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು. ಮೊಬೈಲ್ ಉತ್ಪಾದನೆಯಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ, ಆದ್ರೆ ಇದು ಕೈ, ದಳಕ್ಕೆ ಹೆಮ್ಮೆಯ ವಿಷಯ ಅಲ್ಲ ಎಂದು ಆಕ್ರೋಶಿಸಿದರು.
ಗರೀಬಿ ಹಠಾವೋ ಗ್ಯಾರಂಟಿಯನ್ನು ಕೈ ದಶಕಗಳ ಹಿಂದೆ ನೀಡಿತ್ತು. ಇದು ಇತಿಹಾಸದ ಅತೀ ದೊಡ್ಡ ಸುಳ್ಳಿನ ಕಂತೆಯಾಗಿ ಉಳಿದುಕೊಂಡಿದೆ, ಕೈ ಸುಳ್ಳಿನ ಕಂತೆಯನ್ನೇ ಜನರ ಮುಂದಿಡುತ್ತದೆ, ಹೀಗಾಗಿ ಬಡತನ ನಿವಾರಿಸಲು ಸಾಧ್ಯವಿಲ್ಲ, ಶ್ರೀರಂಗಪಟ್ಟಣ, ಮೈಸೂರು, ಸಂಸ್ಕೃತಿಯ ಪಟ್ಟಣಗಳು, ಆದ್ರೆ ಕೈ ಪಕ್ಷ ಅವಮಾನ ಮಾಡುತ್ತಲೇ ಬಂದಿದೆ, ಇದೀಗ ಭಜರಂಗಬಲಿಯನ್ನು ಅವಮಾನಿಸುತ್ತಿದೆ ಎಂದರು.
ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನಡೆಯುತ್ತಿರುವ ಎಲೆಕ್ಷನ್ ಆಗಿದೆ, ಡಬಲ್ ಎಂಜಿನ್ ಸರ್ಕಾರ ಡಬಲ್ ಸೇವಾ ಮನೋಭಾವ, ಡಬಲ್ ಶಕ್ತಿಯಿಂದ ಕೆಲಸ ಮಾಡ್ತಿದೆ ಎಂದರು. ಅಯೋಧ್ಯೆ, ರಾಮ ಮಂದಿರ, ಕಾಶಿ ವಿಶ್ವನಾಥ ಸೇರಿ ಹಲವು ಮಂದಿರಗಳನ್ನು ಅಭಿವೃದ್ಧಿ ಮಾಡಿದ್ದೇವೆ , ಆದ್ರೆ ಕಾಂಗ್ರೆಸ್ ಇದನ್ನು ಸಹಿಸಿಲ್ಲ ಎಂದರು.