ನವದೆಹಲಿ: ಇಸ್ರೋದ ಮಹಾತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ನೆಲದಲ್ಲಿ ಗೆಲವಿನ ದಾಪುಗಾಲಿಟ್ಟಿದೆ. ಇನ್ನು ಚಂದ್ರಯಾನದ ಯಶಸ್ವಿ ಬೆನ್ನಲ್ಲೇ ಇಸ್ರೋಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಭಾರತದ ಪ್ರಮುಖ ನಾಯಕರೂ ಟ್ವೀಟ್ ಮಾಡುವ ಮೂಲಕ ಇಸ್ರೋಗೆ ಅಭಿನಂದನೆ ತಿಳಿಸಿ, ಸಂಭ್ರಮ ಹಂಚಿಕೊಂಡಿದ್ದಾರೆ.
ಇಸ್ರೋಗೆ ರಾಷ್ಟ್ರಪತಿ ಅಭಿನಂದನೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಂದ್ರಯಾನದ ಯಶಸ್ವಿಯನ್ನು ಟಿ.ವಿ.ಯಲ್ಲಿ ವೀಕ್ಷಿಸಿದರು. ಬಳಿಕ ಟ್ವೀಟ್ ಮೂಲಕ ಇಸ್ರೋಗೆ ತಮ್ಮ ಅಭಿನಂದನೆ ತಿಳಿಸಿದ್ದಾರೆ.
ಭಾರತೀಯ ಪ್ರತಿಭೆಯ ಶಕ್ತಿಗೆ ಸಾಕ್ಷಿ: ಅಮಿತ್ ಶಾ
ನಮ್ಮ ವಿಜ್ಞಾನಿಗಳು ಈ ಕಾರ್ಯಾಚರಣೆಯನ್ನು ಐತಿಹಾಸಿಕ ಯಶಸ್ಸನ್ನು ಮಾಡಲು ಅವರ ಅವಿರತ ಪ್ರಯತ್ನಗಳಿಗಾಗಿ ಇಸ್ರೋಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಹೆಗ್ಗುರುತಿನ ಸಾಧನೆಯು ಭಾರತೀಯ ಪ್ರತಿಭೆಯ ಶಕ್ತಿಗೆ ಸಾಕ್ಷಿಯಾಗಿದೆ. ಪ್ರಧಾನ ಮಂತ್ರಿಯವರ ಕಲ್ಪನೆಯಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.
ಇದು ಹೆಮ್ಮೆಯ ಕ್ಷಣ: ರಾಮನಾಥ್ ಕೋವಿಂದ್
ಚಂದ್ರಯಾನದ ಯಶಸ್ಸಿಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಅಭಿನಂದಿಸಿದ್ದು, ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ #Chandrayan3 ಅನ್ನು ಮೃದುವಾಗಿ ಕಾಲಿರಿಸುವ ಮೂಲಕ ಭಾರತವು ಮತ್ತೊಮ್ಮೆ ಸುಪ್ರೀಂ ಎಂದು ಸಾಬೀತುಪಡಿಸಿದೆ. ಇಸ್ರೋ ಮತ್ತು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು. ಚಂದ್ರನ ಮೇಲೆ ಹೆಜ್ಜೆ ಗುರುತುಗಳಿರುವಾಗ ಆಕಾಶಕ್ಕೆ ಮಿತಿಯಲ್ಲ. ಇದು ಹೆಮ್ಮೆಯ ಕ್ಷಣ..ಜೈ ಹಿಂದ್ ಎಂದಿದ್ದಾರೆ.
ಯುವಪೀಳಿಗೆಗೆ ಸ್ಪೂರ್ತಿ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಚಂದ್ರಯಾನದ ಯಶಸ್ಸಿಗೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಇಂದಿನ ಸಾಧನೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಪ್ರಚಂಡ ಜಾಣ್ಮೆ ಮತ್ತು ಕಠಿಣ ಪರಿಶ್ರಮದ ಫಲವಾಗಿ #Chandrayan3 ಅಜ್ಞಾತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. 1962 ರಿಂದ, ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಹೊಸ ಎತ್ತರಗಳನ್ನು ಅಳೆಯುವುದನ್ನು ಮುಂದುವರೆಸಿದೆ ಮತ್ತು ಯುವ ಕನಸುಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.
ವೈಜ್ಞಾನಿಕ ಆವಿಷ್ಕಾರದಲ್ಲಿ ಹೊಸ ಮಾರ್ಗಗಳಿಗೆ ನಾಂದಿ: ಸಿಜೆಐ
ಚಂದ್ರಯಾನ ಯಶಸ್ಸಿನ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೂಡ ಅಭಿನಂದನೆ ತಿಳಿಸಿದ್ದು, “ನಮ್ಮ ಮಹಾನ್ ರಾಷ್ಟ್ರದ ಪ್ರಜೆಯಾಗಿ ಅಪಾರ ಹೆಮ್ಮೆಯಿಂದ ನಾನು ಇಂದು ಚಂದ್ರನ ಮೇಲೆ ಚಂದ್ರಯಾನ 3 ರ ಗಮನಾರ್ಹ ಲ್ಯಾಂಡಿಂಗ್ ಅನ್ನು ನೋಡಿದೆ. ಇದು ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರನ ಇಳಿಯುವಿಕೆಯನ್ನು ಸಾಧಿಸಿದ ಏಕೈಕ ರಾಷ್ಟ್ರ ಭಾರತವಾಗಿದೆ. ಇದು ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಹೊಸ ಮಾರ್ಗಗಳಿಗೆ ನಾಂದಿ ಹಾಡುತ್ತದೆ. ಇದು ರಾಷ್ಟ್ರದ ಮೆರವಣಿಗೆಯಲ್ಲಿ ಒಂದು ಮೈಲಿಗಲ್ಲು ಪ್ರತಿನಿಧಿಸುತ್ತದೆ. ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ತಂಡ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.