ಮುಂಬೈ: ನಗರದಲ್ಲಿ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ಬಾರಾಮತಿ ಸಂಸದೆಯ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆಯವರ ಸೀರೆಗೆ ಬೆಂಕಿ ಹೊತ್ತಿಕೊಂಡಿದ್ದು, ಸಂಸದೆ ತಕ್ಷಣವೇ ತಮ್ಮ ಕೈಗಳಿಂದ ಸೀರೆಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆ ಪುಣೆಯ ಹಿಂಜೆವಾಡಿಯಲ್ಲಿ ಈ ಘಟನೆ ನಡೆದಿದ್ದು, ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಲು ವೇದಿಕೆಯಲ್ಲಿ ಮೇಜಿನ ಮೇಲೆ ಇರಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರು. ಸಂಸದೆ ಟೇಬಲ್ ಹತ್ತಿರ ಹೋಗುತ್ತಿದ್ದಂತೆ ಕೆಳಗಡೆ ಇರಿಸಲಾಗಿದ್ದ ದೀಪಕ್ಕೆ ತಾಗಿ ಸೀರೆಗೆ ಬೆಂಕಿ ತಗುಲಿದೆ. ಆದರೆ ತಕ್ಷಣವೇ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಹೇಳಿದ್ದಾರೆ.ಘಟನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ.
ನನ್ನ ಬೆಂಬಲಿಗರು, ನಾಗರಿಕರು, ಪಕ್ಷದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳಿಗೆ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ಬಗೆಗಿನ ಪ್ರೀತಿ ಹಾಗೂ ಕಾಳಜಿಗೆ ಎಲ್ಲರನ್ನೂ ಗೌರವಿಸುತ್ತೇನೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ಸಂಸದರ ಸೀರೆಗೆ ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಸುಪ್ರಿಯಾ ಸುಳೆ ಅವರಿಗೆ ಅಪಘಾತ ಸಂಭವಿಸಿಲ್ಲ. ಸೀರೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದ ತಕ್ಷಣ ಅದನ್ನು ನಂದಿಸಿದರು.