ನವದೆಹಲಿ: ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಮರ್ಪಕ ಉತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೂ ಮುನ್ನ ಆಯೋಜಿಸಿದ್ದ ಸಂಪುಟ ಸಚಿವರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇತಿಹಾಸಕ್ಕೆ ಹೋಗುವ ಅಗತ್ಯವಿಲ್ಲ. ಆದರೆ ಸಂವಿಧಾನದ ಪ್ರಕಾರ ಇರುವ ವಾಸ್ತವಾಂಶಗಳಿಗೆ ಅಂಟಿಕೊಳ್ಳಿ. ಹಾಗೆಯೇ ವಿಷಯದ ಸಮಕಾಲೀನ ಪರಿಸ್ಥಿತಿ ಕುರಿತು ಮಾತನಾಡಿ ಎಂದು ಉದಯನಿಧಿಗೆ ಪಿಎಂ ಸಲಹೆ ನೀಡಿದರು.
ಇದನ್ನೂ ಓದಿ : ಗಣೇಶ ಚತುರ್ಥಿಯಂದು ಹೊಸ ಸಂಸತ ಭವನಕ್ಕೆ ಶಿಫ್ಟ್..!
ಹಾಗೆಯೇ ‘ಇಂಡಿಯಾ ಹಾಗೂ ಭಾರತ’ ಹೆಸರಿನ ವಿವಾದದ ಕುರಿತು ಯಾವುದೇ ಹೇಳಿಕೆ ನೀಡದೆ ದೂರ ಇರುವಂತೆಯೂ ಮೋದಿ ಸೂಚನೆ ನೀಡಿದ್ದಾರೆ. ಈ ವಿಷಯದ ಕುರಿತು ಅಧಿಕಾರ ನೀಡಿರುವ ವ್ಯಕ್ತಿಗಳು ಮಾತ್ರವೇ ಮಾತನಾಡಬೇಕು ಎಂದಿದ್ದಾರೆ.
ವಿವಾದ ಸೃಷ್ಟಿಸಿರುವ ಉದಯನಿಧಿ
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮಗ ಉದಯನಿಧಿ, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ. ಅಂತಹ ಸಂಗತಿಗಳನ್ನು ವಿರೋಧಿಸಬಾರದು, ಆದರೆ ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಶನಿವಾರ ಹೇಳಿದ್ದರು.
ಇದನ್ನೂ ಓದಿ : ‘ಭಾರತ್ ಅಥವಾ ಇಂಡಿಯಾ’: 2016 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.