ನವದೆಹಲಿ : ಹಳೆಯ ಸಂಸತ್ ಭವನದಲ್ಲಿ ಕೊನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಜವಾಹರ್ ಲಾಲ್ ನೆಹರು ಅವರು ಸಂಸತ್‌ನಲ್ಲಿ ಮಾಡಿದ ಮಧ್ಯರಾತ್ರಿಯ ಭಾಷಣ ಈಗಲೂ ಪ್ರತಿಧ್ವನಿಸುತ್ತಿದೆ. ಅದು ನಮಗೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ಎಂದರು. ಆಗಸ್ಟ್ 14, 1947ರಂದು ಮಧ್ಯರಾತ್ರಿ ಜವಾಹರ್ ಲಾಲ್ ನೆಹರು ಮಾಡಿದ ಭಾಷಣದ ಸಾಲು ನಿಮ್ಮ ಗುರಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳಿ (Tryst with destiny) ಎಂಬುವುದನ್ನು ಉಲ್ಲೇಖಿಸಿ ಮೋದಿ ಮಾತನಾಡಿದರು.
ಇದನ್ನೂ ಓದಿ : Nehru to Modi : ಹಳೆಯ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದ ಪ್ರಧಾನಿ
‘ಸರ್ಕಾರೇನ್ ಆಯೇಗಿ-ಜಾಯೇಗಿ, ಪಾರ್ಟಿಯೇನ್ ಬನೇಗಿ-ಬಿಗ್ಡೇಗಿ, ಲೇಕಿನ್ ಯೇ ದೇಶ್ ರೆಹನಾ ಚಾಹಿಯೇ (ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪಕ್ಷಗಳು ಬರುತ್ತವೆ ಹೋಗುತ್ತವೆ. ಆದರೆ, ದೇಶ ಉಳಿಯಬೇಕು) ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದ ಪ್ರಮುಖ ಸಾಲುಗಳನ್ನು ಕೂಡ ಮೋದಿ ತಮ್ಮ ಭಾಷಣದಲ್ಲಿ ನೆನೆದರು.
ಜವಾಹರ್‌ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿಯಂತಹ ಮಹಾನ್ ನಾಯಕರು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಪಾರ ಕೊಡುಗೆ ನೀಡಿದ್ದಾರೆ. ಇವರೆಲ್ಲರೂ ಭಾರತೀಯ ಸಂಸತ್‌ನಲ್ಲಿ ಜನರ ನಂಬಿಕೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇಂದು ಅವರನ್ನು ನೆನಪಿಸಿಕೊಳ್ಳಲು ಒಂದು ಅತ್ಯುತ್ತಮ ಅವಕಾಶ ಸಿಕ್ಕಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.