ಬೆಂಗಳೂರು: ನೆಲಮಂಗಲ ಕಾಂಗ್ರೆಸ್ ಗೆ ಶಕ್ತಿಯಾಗಿದ್ದವರೆಲ್ಲಾ ಇಂದು ಬಿಜೆಪಿಗೆ ಬಂದಿದ್ದು ಅಲ್ಲಿ ಕಾಂಗ್ರೆಸ್ ಇಂದೇ ಸೋತಂತಾಗಿದೆ ಎಂದು ವೈದ್ಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟರು. ನೆಲಮಂಗಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಮಾತನಾಡಿದರು.
“ನೆಲಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ತೊರೆದು ಆತ್ಮೀಯ ರೇಣುಕಾ ಪ್ರಸಾದ್ ಬಂದಿದ್ದಾರೆ. ಎರಡು ದಶಕ ಕಾಂಗ್ರೆಸ್ನಲ್ಲಿ ಕೆಲಸ ಮಾಡಿದ್ದು, ಡಿಕೆಶಿ ಒಡನಾಡಿಯಾಗಿದ್ದಾರೆ ಅವರ ಸೇರ್ಪಡೆ ಸಂತಸ ತಂದಿದೆ. ತುಳಸಿರಾಮು, ಸಪ್ತಗಿರಿ ಶಂಕರನಾಯಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಮೇಶ್ ಬಂದಿದ್ದಾರೆ. ಇವರೆಲ್ಲಾ ನೆಲಮಂಗಲ ಕಾಂಗ್ರೆಸ್ ಗೆ ಶಕ್ತಿಯಾಗಿದ್ದರು ಅವರೆಲ್ಲಾ ಈಗ ಬಿಜೆಪಿಗೆ ಬಂದಿದ್ದಾರೆ ಎಂದರು.
ನೆಲಮಂಗಲ ಮಾತ್ರವಲ್ಲ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ಹಗಲು ರಾತ್ರಿ ನಿಮ್ಮ ಜೊತೆ ಸೇರಿ ಕೆಲಸ ಮಾಡಲಿದ್ದೇವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈಗ ಕೋವಿಡ್ ಚಿತ್ರ ಬಿಡುಗಡೆ ಮಾಡಲು ಹೊರಟಿದ್ದಾರೆ. ಕೋವಿಡ್ ಕಾಂಗ್ರೆಸ್ ನವರಿಗೆ ಮಾತ್ರ ತಂದಿದ್ದಲ್ಲ, ಇಡೀ ದೇಶಕ್ಕೆ ಬಂದಿತ್ತು, ಅದೇನು ಮಾಡುತ್ತಾರೋ ಮಾಡಲಿ, ಅವರ ನಡೆ ಸರಿಯಲ್ಲಎಂದು ಬಿಜೆಪಿ ಸೇರಿದ ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪಕ್ಷದ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಂಡರು.