ಗುಜರಾತ್: ಚುನಾವಣೆ ಫಲಿತಾಂಶ ನಂತರ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಸಿದ್ದತೆ ನಡೆಸುತ್ತಿದ್ದು, 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದಿದೆ. ಗುಜರಾತ್‌ನ ಹಂಗಾಮಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಹಾರ್ದಿಕ್ ಪಟೇಲ್ ಹೆಸರನ್ನು ಸಂಪುಟದಲ್ಲಿ ಕೈ ಬಿಟ್ಟು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲು ಮುಂದಾಗಿದೆ. ಸಂಭಾವ್ಯ ಸಚಿವರ ಹೆಸರಿನ ಪಟ್ಟಿಯಲ್ಲಿ ಹರ್ಷ ಸಾಂಘ್ವಿ, ಅಲ್ಪೇಶ್ ಠಾಕೂರ್, ಜಿತು ವಘಾನಿ, ಕಿರಿತ್ ಸಿಂಗ್ ರಾಣಾ ಮತ್ತು ಕನು ದೇಸಾಯಿ ಅನೇಕರ ಹೆಸರಿದ್ದು, ಹಾರ್ದಿಕ್ ಪಟೇಲ್ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದು,ಗಾಂಧಿನಗರದ ಹೊಸ ಸಚಿವಾಲಯದ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಗುಜರಾತಿನ ನೂತನ ಸಚಿವ ಸಂಪುಟಕ್ಕೆ ಹಲವು ಯುವ ಮುಖಗಳನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಪುಟದ ಸಂಭಾವ್ಯ ಪಟ್ಟಿಯ ಪ್ರಕಾರ ಕಿರಿತ್ ಸಿಂಗ್ ರಾಣಾ, ಕಾನು ದೇಸಾಯಿ, ಹೃಷಿಕೇಶ್ ಪಟೇಲ್, ಕುನ್ವರ್ಜಿ ಬವಲಿಯಾ, ರಮಣ್‌ಲಾಲ್ ವೋರಾ, ಗಣಪತ್ ವಾಸವ, ನರೇಶ್ ಪಟೇಲ್, ಹರ್ಷ್ ಸಾಂಘ್ವಿ, ಬಾಲಕೃಷ್ಣ ಶುಕ್ಲಾ ಅವರು ಸಂಪುಟದಲ್ಲಿ ಸ್ಥಾನ ಪಡೆಯಬಹುದು.