Friday, September 29, 2023
spot_img
- Advertisement -spot_img

ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ: ಅಂಗಿ ಮೇಲೆ ಕಮಲದ ಚಿತ್ರ, ಖಾಕಿ ಪ್ಯಾಂಟ್!

ನವದೆಹಲಿ: ಹೊಸ ಸಂಸತ್ ಕಟ್ಟಡದಲ್ಲಿ ಸೆಪ್ಟೆಂಬರ್ 18 ರಿಂದ ಐದು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದ್ದು, ಸಂಸತ್ ಸಿಬ್ಬಂದಿಗಳಿಗೆ ಸಚಿವಾಲಯ ನಿಗದಿಪಡಿಸಿರುವ ಸಮವಸ್ತ್ರ ವಿವಾದಕ್ಕೆ ಕಾರಣವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಸಂಸತ್ ಸಿಬ್ಬಂದಿಗಳ ಸಾಂಪ್ರದಾಯಿಕ ಧಿರಿಸಾದ ಸಫಾರಿ ಸೂಟ್‌ಗಳ ಬದಲಿಗೆ, ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಕೆನೆ ಬಣ್ಣದ ಮ್ಯಾಂಡರಿನ್ ಕಲರ್ ಶರ್ಟ್ ನೀಡಲಾಗಿದ್ದು, ಅದರಲ್ಲಿ ಗುಲಾಬಿ ಬಣ್ಣದ ಕಮಲದ ಹೂವಿನ ಪ್ರಿಂಟ್ ಇದೆ. ವೇಸ್ ಕೋಟ್ ಹಾಗೂ ಅದಕ್ಕೆ ತಕ್ಕನಾಗಿ ಖಾಕಿ ಪ್ಯಾಂಟ್ ನೀಡಲಾಗಿದೆ.

ಇದನ್ನೂ ಓದಿ; ಆರ್.ಅಶೋಕ್‌ಗೆ ಸಂಕಷ್ಟ ತಂದಿಟ್ಟ ‘ಡಿ.ಕೆ. ಸಹೋದರರು’!

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ನಿಯೋಜಿಸಲಾಗುವ ಸಿಬ್ಬಂದಿಗೆ ಹೊಸ ಸಮವಸ್ತ್ರ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಹೊಸ ಸಂಸತ್ತಿನ ಕಟ್ಟಡವು ಮುಂದಿನ ವಾರ ತನ್ನ ಮೊದಲ ಅಧಿವೇಶನವನ್ನು ನಡೆಸಲು ಸಿದ್ಧವಾಗಿದೆ. ಅಧಿಕಾರಿಗಳಿಗೆ ಕೆನೆ ಬಣ್ಣದ ಜಾಕೆಟ್‌ಗಳು, ಗುಲಾಬಿ ಬಣ್ಣದ ಕಮಲ ಪ್ರಿಂಟ್ ಇರುವ ಶರ್ಟ್‌ಗಳು ಮತ್ತು ಖಾಕಿ ಪ್ಯಾಂಟ್‌ಗಳನ್ನು ನೀಡಲಾಗುತ್ತದೆ. ಉಭಯ ಸದನಗಳ ಸಿಬ್ಬಂದಿಗೆ ಸಮವಸ್ತ್ರ ಒಂದೇ ಆಗಿರುತ್ತದೆ.

ಅಟೆಂಡರ್‌ಗಳು ಮತ್ತು ಮೌಖಿಕ ವರದಿ ಸೇವೆಗೆ ನಿಯೋಜಿಸಲಾದ ಎಲ್ಲ 271 ಸಿಬ್ಬಂದಿಗೆ ಈಗಾಗಲೇ ಹೊಸ ಸಮವಸ್ತ್ರವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ನಿಯೋಜಿತವಾಗಿರುವ ಸಂಸತ್ತಿನ ಭದ್ರತಾ ಸೇವೆಯ (ಕಾರ್ಯಾಚರಣೆಗಳು) ಭದ್ರತಾ ಅಧಿಕಾರಿಗಳು ನೀಲಿ ಸಫಾರಿ ಸೂಟ್ ಬದಲಿಗೆ ಸೈನ್ಯದ ಸಮವಸ್ತ್ರ ಮಾದರಿ ಬಟ್ಟೆ ಧರಿಸುತ್ತಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ತಡರಾತ್ರಿ ಬಿಜೆಪಿ ಕೋರ್ ಕಮಿಟಿ ಸಭೆ : ಅಸಮಾಧಾನಿತರು ಗೈರು

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸೆಪ್ಟೆಂಬರ್ 6 ರಂದೇ ತಮ್ಮ ಉಡುಪುಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಹೊಸ ಸಂಸತ್ತಿನ ಕಟ್ಟಡ ಉದ್ಘಾಟನೆ ವೇಳೆಯಲ್ಲೇ ಸಮವಸ್ತ್ರ ಅನಾವರಣಗೊಳಿಸುವ ಯೋಜನೆ ಇತ್ತಾದರೂ, ಕಾರಣಾಂತರಗಳಿಂದ ಮುಂದೂಡಲಾಗಿತ್ತು.

ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಐದು ದಿನಗಳ ವಿಶೇಷ ಅಧಿವೇಶದಿಂದ ಸಂಸತ್ತಿನ ಹಳೆಯ ಕಟ್ಟಡಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ. ಸೆಪ್ಟೆಂಬರ್ 19ರ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೊಸ ಸಂಸತ್ ಭವನ ಕಾರ್ಯನಿರ್ವಹಿಸಲಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles