Thursday, June 8, 2023
spot_img
- Advertisement -spot_img

ಇಡುಕ್ಕಿ ಗ್ರಾಮದ ಸಮುದಾಯ ಭವನ ರಾಷ್ಟ್ರೀಯ ತನಿಖಾದಳದ ವಶಕ್ಕೆ

ದಕ್ಷಿಣ ಕನ್ನಡ: ಇಡುಕ್ಕಿ ಗ್ರಾಮದ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ ನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ತೆಗೆದುಕೊಂಡಿದೆ ಮೂಲಗಳು ತಿಳಿಸಿವೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಡುಕ್ಕಿ ಗ್ರಾಮದ ಸಮುದಾಯ ಭವನವನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ತೆಗೆದುಕೊಂಡಿದೆ ಸಮುದಾಯ ಭವನದಲ್ಲಿ ಓಡಾಟ ಅಥವಾ ಸಭಾಂಗಣದಲ್ಲಿ ಯಾವುದೇ ಕೆಲಸಗಳನ್ನು ನಡೆಸುವುದನ್ನು ಎನ್ಐಎ ನಿಷೇಧಿಸಿದೆ.

ಮೂಲಗಳ ಪ್ರಕಾರ, ಇಡುಕ್ಕಿ ಗ್ರಾಮದ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ ನ್ನು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಹೀಗಾಗಿ, ತನಿಖಾ ಸಂಸ್ಥೆಯು 20 ಗುಂಟೆಗಳ ಸಂಪೂರ್ಣ ಆವರಣವನ್ನು ವಶಕ್ಕೆ ತೆಗೆದುಕೊಂಡಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸಮುದಾಯ ಭವನವನ್ನು ಬಾಡಿಗೆಗೆ ನೀಡುವಂತಿಲ್ಲ ಅಥವಾ ಬೇರೆಯವರಿಗೆ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.

Related Articles

- Advertisement -spot_img

Latest Articles