ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರಕ್ಕೆಎನ್ಐಎ ಅಧಿಕಾರಿಗಳ ತಂಡ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಎಸ್ಐಎಸ್ ಉಗ್ರನ ಜೊತೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಇಂದು ಶಹಾಪುರ ನಗರದ ವ್ಯಕ್ತಿಯೋರ್ವನ ವಿಚಾರಣೆಗೆ ಆಗಮಿಸಿರುವ ತಂಡವು ಶಂಕಿತನ ಮನೆಯಲ್ಲಿ ತಪಾಸಣೆ ನಡೆಸಿದೆ.
ಇದನ್ನೂ ಓದಿ : Hampi Utsav 2023 : ಕವಿದ ಬರ ಕಾರ್ಮೋಡ : ವಿಶ್ವವಿಖ್ಯಾತ ಹಂಪಿ ಉತ್ಸವ ಮುಂದೂಡಿಕೆ
ಜಾರ್ಖಂಡ್ ಮೂಲದ ಎನ್‌ಐಎ ತಂಡದಲ್ಲಿ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳು ಎರಡನೇ ಬಾರಿಗೆ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ಸತತ 4 ಗಂಟೆಗಳ ಕಾಲ ಉಗ್ರರ ಸಂಪರ್ಕಿತ ಆರೋಪಿಯ ವ್ಯಕ್ತಿ ಸಲೀಂ ಮನೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ರಾಂಚಿಯಲ್ಲಿ ಬಂಧಿತ ಐಎಸ್ಐಎಸ್ ಉಗ್ರರೊಂದಿಗೆ ಆರೋಪಿತನು ಇನ್ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಆಂಧ್ರಪ್ರದೇಶ ನೊಂದಣಿ ಇರುವ ವಾಹನದಲ್ಲಿ ಆಗಮಿಸಿದ್ದ ತಂಡವು ಇಂದು ಬೆಳಗಿನ ಜಾವ ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದೆ. ಆರೋಪಿಯ ವಿಚಾರಣೆಯ ಮಾಹಿತಿ ದೊರೆತ ಬಳಿಕವೇ ಜಿಲ್ಲೆ ಹಾಗೂ ಐಎಸ್‌ಐಎಸ್ ಉಗ್ರರೊಂದಿಗಿನ ನಂಟಿನ ಕುರಿತು ಮಾಹಿತಿ ಹೊರಬೀಳಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.