ರಾಮನಗರ: ಬೆಂಬಲಿಗರೊಂದಿಗೆ ರಾಮನಗರದಲ್ಲಿ ಪ್ರಚಾರಕ್ಕೆ ಹೋಗಿದ್ದ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚರಂಡಿ, ರಸ್ತೆಯ ವ್ಯವಸ್ಥೆಯಿಲ್ಲ, ನಮಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯ, ಶುಚಿತ್ವದ ಸಮಸ್ಯೆಯಿದೆ ಹೀಗಾಗಿ ಇಲ್ಲಿಗೆ ಯಾರೂ ಓಟು ಕೇಳಲು ಬರಬೇಡಿ ಎಂದು ಆಕ್ರೋಶಿಸಿದರು. ನಿಮ್ಮ ತಾಯಿ ಬಂದು ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕೆಲಸ ಪೂರ್ಣ ಆಗಿಲ್ಲ. ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಹಾಗಾಗಿ ನಾವು ಮತಹಾಕಲ್ಲ ಎಂದು ವಿರೋಧಿಸಿದರು.
ಮೂಲ ಸೌಕರ್ಯಗಳು ಸರಿಯಾಗಿಲ್ಲ, ನಿಮ್ಮ ತಾಯಿಯವರು ಸೌಲಭ್ಯ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆಯೇ ಹೊರತು ಮಾಡಿಕೊಟ್ಟಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸೋದಾಗಿ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.