ರಾಮನಗರ: ಅಭಿವೃದ್ಧಿ ಎಂಬುದು ನಿರಂತರ ಅದು ನಿಂತ ನೀರಲ್ಲ. ಒಂದೇ ದಿನ ಏನು ಮಾಡಲು ಆಗಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಹಜವಾಗಿ ಜನ ಕೇಳ್ತಾರೆ, ಜನಪ್ರತಿನಿಧಿ ಸಮಸ್ಯೆ ಕೇಳಿ ಉತ್ತರ ಕೊಟ್ಟು ಕೆಲಸ ಮಾಡಿಸುವುದು ನಮ್ಮ ಧರ್ಮ. ತಾಳ್ಮೆ ಇಲ್ಲದೆ ಹೋದರೆ ರಾಜಕೀಯಕ್ಕೆ ಬರಬಾರದು ಎಂದು ಅಭಿಪ್ರಾಯಪಟ್ಟರು.
ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ಓಟ್ ಕೊಡಲ್ಲ ಎಂದು ಕೆಲವು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದ, ಇದಕ್ಕೆ ಪ್ರತಿಕ್ರಿಯಿಸಿ,ನಮ್ಮ ಮತದಾರರು ನಮ್ಮ ಕುಟುಂಬದ ಸದಸ್ಯರು ಇದ್ದ ಹಾಗೆ. ನಾನೇ ನಮ್ಮ ಮುಖಂಡರಿಗೆ ಹೇಳಿದ್ದೇನೆ. ಕೆಲವು ಕಡೆ ಕೆಲಸ ಆಗಿರುತ್ತದೆ, ಮತ್ತೊಂದೆಡೆ ಕೆಲಸ ಆಗಿರಲ್ಲ, ಕ್ಷೇತ್ರದಲ್ಲಿ ನಮ್ಮನ್ನ ವಿರೋಧಿಸುವ ಜನರಿರ್ತಾರೆ, ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಒಂದು ಲಕ್ಷ ಜನ ನಮಗೆ ವೋಟ್ ಹಾಕಿದರೆ ಉಳಿದವರು ಬೇರೆ ಪಕ್ಷಗಳಿಗೆ ಹಾಕಿರುತ್ತಾರೆ. ಕಾಮನ್ ಇದು ತಲೆ ಕೆಡಿಸಿಕೊಳ್ಳಬಾರದು. ಆದರೆ ಕ್ಷೇತ್ರದ ಎಲ್ಲರೂ ನಮ್ಮ ಜನರೇ. ಆಶ್ವಾಸನೆ ಎಲ್ಲರೂ ಕೊಟ್ಟು ಹೋಗುತ್ತಾರೆ. ನಾನು ಕೆಲಸ ಮಾಡಿ ಮುಖ ತೋರಿಸುತ್ತೇನೆ ಎಂದಿದ್ದೇನೆ. ನಾನು ಆಶ್ವಾಸನೆ ಕೊಡುವುದಿಲ್ಲ. ಸುಳ್ಳು ವಿಚಾರ ಚರ್ಚೆ ಮಾಡಲ್ಲ ಎಂದರು.