Wednesday, May 31, 2023
spot_img
- Advertisement -spot_img

ಕೂಪನ್‌ ಕಾರ್ಡ್‌ ಕೊಟ್ಟು ಮತ ಪಡೆದು ನನ್ನನ್ನು ಸೋಲಿಸಿದ್ದಾರೆ

ರಾಮನಗರ: ಕಾಂಗ್ರೆಸ್‌ನವರು 3 ಸಾವಿರ ರೂ. ಕೂಪನ್‌ ಕಾರ್ಡ್‌ ಕೊಟ್ಟು ಮತ ಪಡೆದು ಜನರ ದಾರಿ ತಪ್ಪಿಸಿ, ಆ ಮೂಲಕ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, 2004 ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದ್ರೆ ಈ ಬಾರಿ ಜನರು ಬೇರೆ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ‌ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಕಾಂಗ್ರೆಸ್ ನವರು ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್‌ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ , ನಮ್ಮಪ್ಪ ನಿಮ್ಮನ್ನ ನಂಬಿ ಸ್ಪರ್ಧೆ ಮಾಡಿದರು ನೀವು ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು ಎಂದು ತಿಳಿಸಿದರು.

ಚುನಾವಣೆಯಲ್ಲಿ ಇಕ್ಬಾಲ್​ ಹುಸೇನ್​ 10,715 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದು, ಒಟ್ಟು 87,690 ಮತ ಪಡೆದಿದ್ದಾರೆ. ನಿಖಿಲ್​ ಅವರು 76,975 ಮತಗಳನ್ನು ಪಡೆದುಕೊಂಡಿದ್ದರು. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಎಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ ಎಂದಿದ್ದರು.

Related Articles

- Advertisement -

Latest Articles