ಬೆಂಗಳೂರು : ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಕುರಿತು ಬಿಜೆಪಿ ನಾಯಕಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಮಾಡಿದ್ದ ಟ್ವೀಟ್ ಇದೀಗ ಭಾರೀ ವೈರಲ್ ಆಗಿದೆ.
2018ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ‘ಭಾರತ್ ಬಂದ್’ ಗೆ ಕರೆ ನೀಡಿತ್ತು. ಆ ಸಂದರ್ಭದಲ್ಲಿ ಬಂದ್ ವಿರೋಧಿಸಿ ಉಡುಪಿಯಲ್ಲಿ ಬೀದಿಗಿಳಿದಿದ್ದ ಚೈತ್ರಾ ಕುಂದಾಪುರ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ವಾಗ್ವಾದ ನಡೆಸಿದ್ದರು. ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತ ವಿಡಿಯೋ ವೈರಲ್ ಆಗಿ ಬಿಜೆಪಿ ಕೇಂದ್ರ ನಾಯಕರ ಗಮನಕ್ಕೂ ಬಂದಿತ್ತು.
ಇದನ್ನೂ ಓದಿ : ಚೈತ್ರಾ ಕುಂದಾಪುರ ಜೊತೆ ನನಗೆ ಯಾವುದೇ ಸಂಪರ್ಕ ಇರಲಿಲ್ಲ : ಶೋಭಾ ಕರಂದ್ಲಾಜೆ
ಚೈತ್ರಾ ವೈರಲ್ ವಿಡಿಯೋ ಒಂದನ್ನು ರೀ ಟ್ವೀಟ್ ಮಾಡಿದ್ದ ನಿರ್ಮಲಾ ಸೀತಾರಾಮನ್, ಚೈತ್ರಾ ‘ಡೇರಿಂಗ್ ಗರ್ಲ್’ ಎಂದಿದ್ದಲ್ಲದೆ, ಪ್ರಧಾನಿ ಮೋದಿ ಮೇಲಿನ ನಂಬಿಕೆ ತೋರಿಸುವಲ್ಲಿ ಈ ಯುವತಿಯ ಧೈರ್ಯ ಗಮನಾರ್ಹ ಎಂದು ಹಾಡಿ ಹೊಗಳಿದ್ದರು. ನಿರ್ಮಲಾ ಸೀತಾರಾಮನ್ ಅವರ ಟ್ವೀಟ್ ಚೈತ್ರಾಗೆ ಬಾರಿ ಪ್ರಸಿದ್ದಿಯನ್ನು ನೀಡಿತ್ತು. ಆ ಬಳಿಕ ಚೈತ್ರಾ ಹಿಂದುತ್ವದ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದರು.
ಅಂದು ನಿರ್ಮಲಾ ಸೀತಾರಾಮನ್ ‘ಡೇರಿಂಗ್ ಗರ್ಲ್ ಎಂದಿದ್ದ ಅದೇ ಚೈತ್ರಾ, ಇಂದು ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟಿ ಕೋಟಿ ವಂಚಿಸಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಹಾಗಾಗಿ, ಸೀತಾರಾಮನ್ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.