ನವದೆಹಲಿ: ಕಾರುಗಳಿಗೆ ಏರ್‌ಬ್ಯಾಗ್ ಕಡ್ಡಾಯವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಅವರು ಉಲ್ಲೇಖಿಸಿದ್ದ ಪ್ರಯಾಣಿಕ ಕಾರುಗಳಿಗೆ 6 ಏರ್ ಬ್ಯಾಗ್ ಕಡ್ಡಾಯ ಎಂಬ ಕುರಿತು ಪ್ರತಿಕ್ರಿಯಿಸಿ ಈ ಆದೇಶ ಕಡ್ಡಾಯವಲ್ಲ ಎಂದಿದ್ದಾರೆ.
2022 ರಲ್ಲಿ, ಭಾರತ ಸರ್ಕಾರವು ಪ್ರಯಾಣಿಕ ಕಾರುಗಳು ಆರು ಏರ್‌ಬ್ಯಾಗ್‌ಗಳು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ ಮತ್ತು ಈ ನಿಯಮವು ಅಕ್ಟೋಬರ್ 2023 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದರು. ಆದರೆ ಇಂದು ಈ ನಿಯಮ ಕಡ್ಡಾಯವಲ್ಲ ಎಂದಿದ್ದಾರೆ.
ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ ಶೇ.10 ರಷ್ಟು ಜಿಎಸ್‌ಟಿ ಹೇರಲಾಗಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅವರು, ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಯೋಜನೆ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ; ಪತ್ರಕರ್ತ ಸುಧೀರ್ ಚೌಧರಿ ವಿರುದ್ಧ ಎಫ್‌ಐಆರ್
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ನಿತಿನ್ ಗಡ್ಕರಿ, ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯ. 2070 ರ ವೇಳೆಗೆ ಕಾರ್ಬನ್ ನೆಟ್ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಟೋಮೊಬೈಲ್ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಇಂಧನಗಳು ಆಮದು ಬದಲಿಗಳಾಗಿರಬೇಕು, ವೆಚ್ಚ-ಪರಿಣಾಮಕಾರಿ, ಸ್ಥಳೀಯ ಮತ್ತು ಮಾಲಿನ್ಯ-ಮುಕ್ತವಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.