Monday, March 20, 2023
spot_img
- Advertisement -spot_img

ಪ್ರಧಾನಿ ನರೇಂದ್ರ ಮೋದಿಯವರಿಗೂ ಸ್ವಾತಂತ್ರ‍್ಯ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ

ಪಾಟ್ನಾ : ಪ್ರಧಾನಿ ನರೇಂದ್ರ ಮೋದಿಯವರಿಗೂ ಸ್ವಾತಂತ್ರ‍್ಯ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ, ಆರ್‌ಎಸ್‌ಎಸ್ ಸ್ವಾತಂತ್ರ‍್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ. ಆದರೂ ನಾವು ಭಾರತದ ಪಿತಾಮಹ ಅನ್ನೋ ಹೇಳಿಕೆಯನ್ನು ನಾವು ಕೇಳಿದ್ದೇವೆ. ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.


ಅಮೃತಾ ಫಡ್ನವೀಸ್ ಹೇಳಿಕೆ ಉಲ್ಲೇಖಿಸಿ ಮಾತನಾಡಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಇತ್ತೀಚೆಗೆ `ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಾರತದ ಪಿತಾಮಹ’ ಎಂದು ಬಣ್ಣಿಸಿದ್ದರು. ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತರೇ, ಮೋದಿ ಜೀ ಅವರು ನವ ಭಾರತದ ಪಿತಾಮಹ. ಇಬ್ಬರೂ ರಾಷ್ಟ್ರಪಿತಾಮಹರೇ ಎಂದು ಗುಣಗಾನ ಮಾಡಿದ್ದರು.ಕೆಲವು ಶ್ರೀಮಂತ ಉದ್ಯಮಿಗಳಿಗಾಗಿ ಮೋದಿಜಿಯನ್ನು ನವಭಾರತದ ರಾಷ್ಟ್ರಪಿತರನ್ನಾಗಿ ಮಾಡಲು ಅಮೃತಾ ಅವರು ಬಯಸಿದ್ರೆ, ಅವರು ಮಾಡಿಕೊಳ್ಳಲಿ, ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಮಹಾತ್ಮ ಗಾಂಧಿ ಅವರನ್ನ ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಯ ಆಧುನಿಕ ಭಾರತ ಕೆಲವು ಹಿತೈಷಿಗಳನ್ನು ಶ್ರೀಮಂತರನ್ನಾಗಿ ಮಾಡುವುದು ಹಾಗೂ ದೀನ ದಲಿತರನ್ನ ಹಸಿವಿನಿಂದಲೇ ಉಳಿಯುವಂತೆಯೇ ಮಾಡುತ್ತಿದೆ. ಇಂತಹ ನವಭಾರತ ನಮಗೆ ಬೇಕಿಲ್ಲ ಎಂದಿದ್ದಾರೆ.

Related Articles

- Advertisement -

Latest Articles