ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಕಟ್ಟಿಹಾಕಲು ವಿಪಕ್ಷಗಳು ಒಗ್ಗಟ್ಟಾಗಿ I.N.D.I.A ಒಕ್ಕೂಟ ರಚನೆಯಾಗಿದೆ. ಆದರೆ ಈ ಒಕ್ಕೂಟದಲ್ಲಿ ನಾನು ಯಾವುದೇ ಹುದ್ದೆ ಬಯಸಿಲ್ಲ. ಸಂಚಾಲಕ ಹುದ್ದೆ ನನಗೆ ಬೇಡ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ನನಗೆ ಅಂತಹ ಆಸೆ ಇಲ್ಲ. ನಾನು ಎಲ್ಲರನ್ನೂ ಒಗ್ಗೂಡಿಸಲು ಬಯಸುತ್ತೇನೆ. ನನಗೆ ಏನೂ ಬೇಡ, ನನಗೆ ಯಾವುದೇ ವೈಯಕ್ತಿಕ ಆಸೆ ಇಲ್ಲ. ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದೇ ನನ್ನ ಏಕೈಕ ಗುರಿ ಅಥವಾ ಧ್ಯೇಯವಾಗಿದೆ, ಮತ್ತು ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ, ನಾನು ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಬಲಗೊಳಿಸಲು ಸೆ.10ಕ್ಕೆ ಬೃಹತ್ ಸಮಾವೇಶ: ಹೆಚ್.ಡಿ.ದೇವೇಗೌಡ
ಇನ್ನು ಮೈತ್ರಿಕೂಟದ ಮುಂದಿನ ಸಭೆಯೂ ಇದೇ ತಿಂಗಳ 31ರಂದು ಹಾಗೂ ಸೆ.1ರಂದು ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಮೈತ್ರಿಕೂಟದ ನಾಯಕರು ಮುಂಬೈನ ಉಪನಗರದಲ್ಲಿರುವ ಐಷಾರಾಮಿ ಹೋಟೆಲ್ ಗ್ರ್ಯಾಂಡ್‌ನಲ್ಲಿ ನಡೆಯಲಿರುವ 3ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ I.N.D.I.A ಮೈತ್ರಿಕೂಟದ ನೂತನ ಲೋಗೋ ಅನಾವರಣಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.