ಹೈದರಾಬಾದ್: ಸಿಎಂ ಕೆಸಿಆರ್ ಹಾಗೂ ಅಸಾದುದ್ದೀನ್ ಓವೈಸಿ ವಿರುದ್ಧ ಒಂದೂ ಪ್ರಕರಣವಿಲ್ಲ ಯಾಕಂದ್ರೆ ಪ್ರಧಾನಿ ಮೋದಿ ಇವರನ್ನು ನಮ್ಮವರೆಂದು ತಿಳಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ತೆಲಂಗಾಣದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಕೇಂದ್ರೀಯ ಏಜೆನ್ಸಿಗಳ ನೇತೃತ್ವದಲ್ಲಿ ತನಿಖೆ ಎದುರಿಸುತ್ತಿರುವಾಗ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಓವೈಸಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮವರೆಂದು ಪರಿಗಣಿಸಿದ್ದಾರೆ ಎಂದರು.
ಇದನ್ನೂ ಓದಿ: ಅದಾನಿ ತನಿಖೆಗೆ ಹೊಸ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ
‘ಅವರು ಒಬ್ಬರನ್ನೊಬ್ಬರು ಪ್ರತ್ಯೇಕ ಪಕ್ಷಗಳು ಎಂದು ಕರೆದುಕೊಳ್ಳುತ್ತಾರೆ ಆದರೆ ಎರಡೂ ಪಕ್ಷ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಬಿಆರ್‌ಎಸ್ ಸಂಸದರನ್ನು ನಾನು ನೋಡಿದ್ದೇನೆ. ಬಿಜೆಪಿಗೆ ಅಗತ್ಯವಿದ್ದಾಗ ಬೆಂಬಲ ನೀಡಿದ್ದಾರೆ. ಜಿಎಸ್‌ಟಿ, ರಾಷ್ಟ್ರಪತಿ ಚುನಾವಣೆ ಸೇರಿ ಹಲವು ಬಾರಿ ಬಿಆರ್‌ಎಸ್ ನಾಯಕರು ಬಿಜೆಪಿಯನ್ನು ಬೆಂಬಲಿಸಿದ್ದಾರೆ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.