Thursday, June 8, 2023
spot_img
- Advertisement -spot_img

ರಾಹುಲ್ ಗಾಂಧಿ ಪಿಎಂ ಆಗೋವರೆಗೂ ಸಾಲ ಕೊಡೋದಿಲ್ಲ: ಪೋಸ್ಟರ್ ವೈರಲ್

ಮಧ್ಯಪ್ರದೇಶ: ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುವವರೆಗೆ ನಾನು ಸಾಲ ಕೊಡೋದಿಲ್ಲ ಎಂದು ಪಾನ್ ಅಂಗಡಿಯವನೊಬ್ಬ ಪೋಸ್ಟರ್‌ ಹಾಕಿದ್ದು ಎಲ್ಲೆಡೆ ವೈರಲ್ ಆಗಿದೆ.

ಮಧ್ಯಪ್ರದೇಶದ ಪಾನ್ ಅಂಗಡಿಯ ಮಾಲೀಕ ಮಹಮ್ಮದ್ ಹುಸೇನ್ ಈ ಪೋಸ್ಟರ್ ಹಾಕಿರುವ ವ್ಯಕ್ತಿ. ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುವವರೆಗೆ ನನ್ನ ಅಂಗಡಿಯಲ್ಲಿ ಸಾಲ ಕೊಡುವುದಿಲ್ಲ – ಉದಾರಿ ಬಂದ್​​ ಎಂದು ಪೋಸ್ಟರ್ ಹಾಕಿದ್ದಾನೆ! ಆದ್ರೆ ಈ ಪೋಸ್ಟರ್‌ ರಾಹುಲ್‌ ಗಾಂಧಿಯವರನ್ನು ಅಣಕಿಸಿ ಹಾಕಲಾಗಿದ್ಯಾ ? ಅಥವಾ ಬೆಂಬಲಿಸಿ ಹಾಕಿದ್ದಾರಾ ಅನ್ನೋ ಚರ್ಚೆ ಹುಟ್ಟಿಕೊಂಡಿದೆ.

ನೋ ವೇ, ಛಾನ್ಸೇ ಇಲ್ಲ! ರಾಹುಲ್ ಪ್ರಧಾನಿ ಆಗುವುದಿಲ್ಲ, ಅಲ್ಲಿಯವರೆಗೆ ಅಂಗಡಿ ಮಾಲೀಕ ಸೇಫ್​ ಸೇಫ್​ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸಾಲದ ಪ್ರಮಾಣ ಹೆಚ್ಚಾಗಿ, ಸಾಲ ಪಾವತಿ ಆಗದೆ ತೊಂದರೆ ಎದುರಿಸಿದ್ದೇನೆ. ಹೀಗಾಗಿ ಜನವರಿ 1 ರಿಂದ ಸಾಲ ಬಂದ್ ಮಾಡಿದ್ದೇನೆ, ರಾಹುಲ್ ಗಾಂಧಿ ಸದ್ಯಕ್ಕೆ ಪಿಎಂ ಆಗೋ ಅವಕಾಶವಿಲ್ಲ, ಹೀಗಾಗಿ ಈ ಪೋಸ್ಟರ್ ಹಾಕಿದ್ದೇನೆ, ಪಿಎಂ ಆಗೋವರೆಗೆ ನಾನು ಸಾಲ ಕೊಡೋದಿಲ್ಲ, ಹೀಗಾಗಿ ಸಾಲ ನೀಡುವುದು ತಪ್ಪುತ್ತದೆ ಅನ್ನೋದು ನನ್ನ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

- Advertisement -spot_img

Latest Articles