ಕಲಬುರಗಿ: ಸೂರ್ಯ ಚಂದ್ರ ಇರುವವರೆಗೆ ಬಿಜೆಪಿಗೆ ಇರುತ್ತೆ. ಬಿಜೆಪಿ ಮುಕ್ತ ದೇಶ ಮಾಡಲು ಯಾರಿದ್ದು ಸಾಧ್ಯವಿಲ್ಲ ಎಂದು ಡಾ. ಉಮೇಶ ಜಾಧವ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಪಾರ್ಟಿ ಬಿಡಲು ಪ್ರಿಯಾಂಕ್ ಖರ್ಗೆ ಅವರೇ ಕಾರಣ, ಈಗಲೂ ಹೇಳುತ್ತೇನೆ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿಲ್ಲ, ಕಲ್ಯಾಣ ಕರ್ನಾಟಕವೆಂದರೆ ” ಖರ್ಗೆ ಆ್ಯಂಡ್ ಕಂಪನಿ ” ಕಾಂಗ್ರೆಸ್ ನಲ್ಲಿ ಈಗ ಕೇವಲ ಗುಲಾಮಗಿರಿ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಬಸವಣ್ಣ ನಾಡಿನಲ್ಲಿ ಒಳ್ಳೆಯ ಕೆಲಸ ಮಾಡಲಿ, ಚುನಾವಣೆ ಬಂದಾಗ ರಾಜಕೀಯ ಮಾಡಲಿ, ಆದರೆ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ದೊಡ್ಡ ಖಾತೆಯ ಜವಾಬ್ದಾರಿ ಸಿಗದೇ ಜಿಲ್ಲೆಯಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲಿ ಅದನ್ನು ಬಿಟ್ಟು ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಬೇಡ ಎಂದು ಮನವಿ ಮಾಡಿದರು.
ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ. ಅದು ಕಾಂಗ್ರೆಸ್ ನಲ್ಲಿ ಇದೆ, ಒದ್ದು ಒಳಗೆ ಹಾಕಲು ಅವರ ಅಪ್ಪನ ಜಾಗೀರಾ? ಜಿಲ್ಲಾ ಉಸ್ತುವಾರಿ ಸಚಿವರು ಹಲವು ಸಲ ಹೇಳುತ್ತಾರೆ ..ಮೀಟಿಂಗ್ ನಲ್ಲಿ ಮಾತಿಗೊಮ್ಮೆ ಹೇಳುತ್ತಾರೆ ಒದ್ದು ಒಳಗೆ ಹಾಕಿ ಎಂದು ಹೇಳುತ್ತಾರೆ, ಜನರ ಮತ್ತು ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ತಂದೆ ಅವರಿಂದ ಕಲಿಯಲಿ ಎಂದು ಪ್ರಿಯಾಂಕ್ ಅವರಿಗೆ ಕಿವಿ ಮಾತು ಹೇಳಿದರು.
ಕಲಬುರಗಿ ಜನ ಶಾಂತಿ ಪ್ರಿಯರು, ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ದಿನನಿತ್ಯ ಒಂದಿಲ್ಲ ಒಂದು ಕಾರಣ ಜನರಿಗೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವ ಪ್ರಕರಣಗಳು ಮಾತ್ರ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಶಿಕ್ಷಣ ಬಡ ರೈತರ ಬಗ್ಗೆ ಕಾಳಜಿ, ಇಲ್ಲ ಕೇವಲ ಐದು ಗ್ಯಾರಂಟಿ ಅಷ್ಟೇ ಸೀಮಿತವಾಗಿದೆ ಚುನಾವಣೆಯಲ್ಲಿ ಹೇಳಿದ್ದು ಒಂದು ಮಾಡ್ತಿರೋದು ಮತ್ತೊಂದು, ರಾಜ್ಯದ ಯಾವ ಭಾಗಕ್ಕೆ ಸಹ ಅಭಿವೃದ್ಧಿಗೆ ಹಣ ಅನುದಾನ ಬರುತ್ತಿಲ್ಲ , ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಮೊದಲು ಅದರ ಕಡೆಗೆ ಗಮನ ಹರಿಸಲಿ, ಶಾಲೆಗೆ ಹೊಗಲು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ದೊರೆಯುತ್ತಿಲ್ಲ, ಇದರಿಂದ ಮಕ್ಕಳ ಶಿಕ್ಷಣ ಮೇಲೆ ಪರಿಣಾಮ ಬೀಳುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ, ರೈತರ ಸಮಸ್ಯೆಯಿದೆ. ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಎಲ್ಲ ದೊಡ್ಡ ಸಮಸ್ಯೆಗಳನ್ನು ಬಿಟ್ಟು, ಕಾಂಗ್ರೆಸ್ ದಿನ ಬೆಳಗಾದರೆ ಸಾಕು ಬಿಜೆಪಿ ವಿರುದ್ಧ ಆರೋಪ ಮಾಡೋದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.