ವಿಜಯನಗರ: ಧರ್ಮ ಎನ್ನುವುದು ಅತ್ಯಂತ ಸೂಕ್ಷ್ಮವಾದ ವಿಚಾರ, ಧರ್ಮದ ಸೂಕ್ಷ್ಮ ವಿಚಾರಗಳನ್ನ ಚರ್ಚಿಸಿ ದಾರಿ ತಪ್ಪಿಸೋದನ್ನು ಪಕ್ಷಗಳು ಮಾಡಬಾರದು ಎಂದು ಉದಯ ನಿಧಿ ಸ್ಟಾಲಿನ್ ಹೇಳಿಕೆಗೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರತಿಕ್ರಿಯಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಂವಿಧಾನದ ಆರ್ಟಿಕಲ್ 25 ಕೆಳಗೆ ಡಾ.ಬಿ.ಆರ್ ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ, ಅವರವರು ಇಷ್ಟಪಡುವಂತಹ ಧರ್ಮಿಯ ಭಾವನೆಗಳನ್ನು ಹೇಳುವ ಹಕ್ಕಿದೆ ರಾಮಾಯಣದಲ್ಲೂ ಕೂಡ ರಾಜ್ಯ ಅಂದ್ರೆ ಏನು..? ಧರ್ಮ ಮನೆಗೆ ಸೀಮಿತವಾಗಿರೋದು, ಮನಸ್ಸಿಗೆ ಸೀಮಿತವಾಗಿರೋದು ಎಂದು ತಿಳಿಸಿದರು.
ಇದನ್ನೂ ಓದಿ : ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ : ಸಿಎಂ, ಡಿಸಿಎಂಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ
ಈ ದೇಶದ ಪರಂಪರೆ, ಸಂಸ್ಕೃತಿ ಬಗ್ಗೆ ರಾಮಾಯಣ ತಿಳಿಸುತ್ತದೆ,ಧರ್ಮ ನಿರಪೇಕ್ಷಿತ ತತ್ವದ ಮೇಲೆ ರಾಷ್ಟ್ರದ ಆಗು ಹೋಗುಗಳ ಬಗ್ಗೆ ಚಿಂತನೆ ಮಾಡಬೇಕು , ದೇಶದ ನಿರುದ್ಯೋಗ, ದೇಶದ ರೈತರ ಬಗ್ಗೆ ,ದೇಶದ ಆರ್ಥಿಕ ವಿಚಾರಗಳನ್ನು ಚರ್ಚೆ ಮಾಡಬೇಕು, ದೇಶದ ಸರ್ವತೋಮುಖ ಅಭಿವೃದ್ದಿ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.