ಹಾಸನ : ಚಂದ್ರಯಾನ-3 ನಿಂದ ಬಹಳ ವಿಷಯಗಳು ಹೊರಬಂದಿದೆ, ಆ ಸಾಧನೆ ಮಹತ್ತರವಾದದ್ದು, ಅದಕ್ಕೆ ದುಡಿದಂತಹ ಎಲ್ಲ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಶುಭ ಹಾರೈಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇಡೀ ನಮ್ಮ ದೇಶ ಅಷ್ಟೇ ಅಲ್ಲ, ಜಗತ್ತಿಗೆ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ, ಅವರೆಲ್ಲರಿಗೂ ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ, ಜೊತೆಗೆ ಸೂರ್ಯನ ಅಧ್ಯಯನಕ್ಕೆ ಆದಿತ್ಯ L-1 ಉಡಾವಣೆ ಯಶಸ್ವಿಗೆ ಹಾರೈಸಿದರು.
ನಾನು ಹಾಸನಕ್ಕೆ ಆಗಾಗ ಬರ್ತಿನಿ, ಕಾರಣ ಇಷ್ಟೇ, ನಮ್ಮ ಜಿಲ್ಲೆಯ ರಾಜಕಾರಣ ಬೇರೆ, ನಾಲ್ಕು ಜನ ಗೆದ್ದಿದ್ದಾರೆ, ಮೂರು ಜನ ಸೋತಿದ್ದಾರೆ, ರೇವಣ್ಣ ಮಾಡಿರುವ ಕೆಲಸ ಹಿಂದೂಸ್ತಾನದಲ್ಲಿ ಯಾರೂ ಮಾಡಿಲ್ಲ, ಆದರೆ ಅದಕ್ಕೆ ಜನ ಪುರಸ್ಕಾರ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಟಾಪ್ ಬ್ಯಾಂಕರ್ ಆಗಿ ಸ್ಥಾನ ಪಡೆದ ಆರ್‌ಬಿಐ ಅಧ್ಯಕ್ಷ : ಅಭಿನಂದಿಸಿದ ಪಿಎಂ ಮೋದಿ
ನಾನು ಬರ್ತಿರ್ತಿನಿ, ಇಡೀ ರಾಜ್ಯದಲ್ಲಿ ಅನೇಕ ಕಡೆ ಹೋಗ್ತಿನಿ, ನಮ್ಮ ಜಿಲ್ಲೆಗೂ ಬರ್ತಿನಿ, ರೇವಣ್ಣನ ಕೆಲಸವನ್ನು ಜನ ಈ ಬಾರಿ ಗುರ್ತಿಸಲಿಲ್ಲ, ಅದಕ್ಕೆ ಕಾರಣ ಬೇರೆ ಬೇರೆ ಇರಬಹುದು, ನಾನು ಜನತೆ ಬಗ್ಗೆ ಯಾವುದೇ ಆಪಾದನೆ ಮಾಡುವುದಿಲ್ಲ, ನಮ್ಮದೇನು ತಪ್ಪಿದೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ, ಜನಗಳ ಮುಂದೆ ಹೋಗ್ತೇವೆ, ಇನ್ನೂ ಹೆಚ್ಚು ಕೆಲಸ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡ್ತೇವೆ ಎಂದು ಭರವಸೆ ನೀಡಿದರು.
ಇನ್ನೂ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರದ್ದೇನಿದೆ, ಕಾನೂನು ಏನಿದೆ ನೋಡ್ತಿವಿ ಎಂದು ಪ್ರತಿಕ್ರಿಯಿಸಿದರು. ತೀರ್ಪಿನ ಕಾಪಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ, ಆರ್ಡರ್ ಕಾಪಿ ಬರಲಿ, ಅದೇನಿದೆ ಗೊತ್ತಿಲ್ಲ ನನಗೆ, ಜಡ್ಜ್‌ಮೆಂಟ್ ಕಾಪಿ ಬರಲಿ, ನನಗೆ ಯಾವ ಸೂಚನೆಯೂ ಬಂದಿಲ್ಲ, ಕಾನೂನಿಗೆ ನಾವೆಲ್ಲ ಬಾಗಬೇಕು, ಆ ರೀತಿ ನಾವು ಇದ್ದೇವೆ, ಮುಂದೆ ಏನು ಮಾಡಬೇಕು ವಕೀಲರನ್ನು ಕೇಳಿ ಮಾಡ್ತೇವೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.