ಬಳ್ಳಾರಿ: ಪಕ್ಷ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ಪಾತ್ರ ಅಪಾರವಾಗಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ತಿರಸ್ಕಾರ ಮಾಡುವ ಕೆಲಸ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಬಿಜೆಪಿ ವಿರುದ್ಧ ಜನಾರ್ಧನ ರೆಡ್ಡಿ ಮುನಿಸು ವಿಚಾರವಾಗಿ ಬಳ್ಳಾರಿಯಲ್ಲಿ ಮಾತನಾಡಿ, ಏನೇ ಲೋಪ ಆಗಿದ್ದರೂ ನಾನು ಬಿಜೆಪಿ ನಾಯಕರೊಂದಿಗೆ ಮಾತಾಡಿ ಸರಿಪಡಿಸುವೆ , ಯಾವತ್ತಿದರೂ ಜನಾರ್ದನ ರೆಡ್ಡಿ ಬಿಜೆಪಿ ಪರವಾಗಿ ಇರುತ್ತಾರೆ. ಜನಾರ್ದನ ರೆಡ್ಡಿ ಏನು ಹೇಳಿದ್ದಾರೆ ಗೊತ್ತಿಲ್ಲ. ಮಾಧ್ಯಮದ ಮೂಲಕ ನನಗೂ ವಿಚಾರ ಗೊತ್ತಾಗಿದೆ. ಬಿಜೆಪಿಗೆ ಜನಾರ್ದನ ರೆಡ್ಡಿ ಕೊಡುಗೆ ಬಹಳಷ್ಟಿದೆ. ಅವರು ಯಾಕೆ ಹೀಗೆ ಮಾತಾಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.ಜನಾರ್ಧನ ರೆಡ್ಡಿ ಹೇಳಿಕೆ ವಿಚಾರವಾಗಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಈ ಕುರಿತಾಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಬೇಸರ ಆಗಿದ್ದರೂ ಅವರ ಮನವೋಲಿಸುವ ಕಾರ್ಯ ಮಾಡುತ್ತೇವೆ. ನಮ್ಮ ಪಕ್ಷದ ನಾಯಕರ ಜೊತೆ ರೆಡ್ಡಿ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದರು.
ವಿರೋಧ ಪಕ್ಷಗಳು ನನ್ನನ್ನು ಟೀಕಿಸುವ ಹಕ್ಕಿದೆ. ಆದರೆ ಬಿಜೆಪಿಯಿಂದ ಇದನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ಪಕ್ಷ ಕಟ್ಟಲು ಮತ್ತು ಅಧಿಕಾರಕ್ಕೆ ಏರಲು ನನ್ನದೂ ಪಾತ್ರ ದೊಡ್ಡದಿದೆ ಎಂದರು. ಅಲ್ಲದೆ ರಾಜಕೀಯ ಜೀವನದಲ್ಲಿ ತೃಪ್ತಿ ಇರುವುದರಿಂದ ಶೀಘ್ರದಲ್ಲೇ ನನ್ನ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಬಿಜೆಪಿಗೆ ಮುಜುಗರ ಉಂಟುಮಾಡಿತ್ತು. ಇನ್ನೂ ಬಳ್ಳಾರಿಯಲ್ಲಿ ಶ್ರೀಘ್ರದಲ್ಲೆ ಪುನೀತ್ ರಾಜಕುಮಾರ್ ಪ್ರತಿಮೆ ಸ್ಪಾಪನೆ ಮಾಡಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಪುನೀತ್ ಪ್ರತಿಮೆ ಸ್ಪಾಪನೆ ಮಾಡಲು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ನಗರದ ಜಿಲ್ಕಾ ಕ್ರೀಡಾಂಗಣದ ಬಳಿಯ ಪಾರ್ಕ್ನಲ್ಲಿ ಪುನೀತ ಪ್ರತಿಮೆ ಸ್ಪಾಪನೆ ಮಾಡಲಾಗುವುದು ಎಂದರು