ರಾಯಚೂರು : ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿ, ಸಮರ್ಥ ಅಭ್ಯರ್ಥಿ ಇದ್ದಾಗ ಅವರನ್ನು ಕಣಕ್ಕಿಳಿಸಲ್ಲ, ಈಗ ಏನ್ ಹೇಳಬೇಕಿದೆಯೋ ಅದು ಹೇಳಿ ಆಗಿದೆ ಭವಾನಿ ಅಗತ್ಯವಿದ್ದರೆ ನಾನೇ ಹೇಳುತ್ತಿದ್ದೆ ಎಂದು ಹೇಳಿದ್ದಾರೆ.
ಹಾಸನದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ. ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕುಟುಂಬದವರನ್ನ ಸ್ಪರ್ಧೆಗೆ ಇಳಿಸುವುದಿಲ್ಲ ಈಗಾಗಲೇ ಏನು ಹೇಳಬೇಕೋ ಹೇಳಾಗಿದೆ ನಾಲ್ಕೈದು ಜನ ಹೇಳಿದ ಮಾತ್ರಕ್ಕೆ ನಿರ್ಧಾರ ಆಗಲ್ಲ ಎಂದರು.
ಪದೇ ಪದೇ ಈ ಬಗ್ಗೆ ಸಮಜಾಯಿಷಿ ಕೊಡಬೇಕಿಲ್ಲ. ಕೆಲವರಿಗೆ ಪ್ರೀತಿ ವಿಶ್ವಾಸವಿರುತ್ತೆ. ಅಭಿಮಾನದಿಂದ ಮಾತನಾಡಿರುತ್ತಾರೆ . ಅಭಿಮಾನದಿಂದ ಮಾತನಾಡಿದ್ದನ್ನ ಅಭಿಪ್ರಾಯ ಎನ್ನಲು ಆಗುವುದಿಲ್ಲ. ಇನ್ನು ಉಳಿದುದ್ದನ್ನ ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಹಾಸನ ಕ್ಷೇತ್ರದಿಂದ ಟಿಕೇಟ್ ನನಗೆ ನೀಡುತ್ತಾರೆ ಎಂದು ಬಹಿರಂಗವಾಗಿಯೇ ಭವಾನಿ ರೇವಣ್ಣ ಘೋಷಿಸಿದ್ದರು. ಆದರೆ ಕುಮಾರಸ್ವಾಮಿ ಟಿಕೇಟ್ ನೀಡುವುದು ಬೇಡ್ವೇ ಬೇಡ ಅಂತಿದ್ದಾರೆ.