ಚಿಕ್ಕಬಳ್ಳಾಪುರ : ʼಟಿಕೆಟ್ ಕೊಟ್ರೆ ನಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಸಿದ್ದ. ಆದರೆ, ಟಿಕೆಟ್ ನಿರ್ಧರಿಸೋದು ಹೈ ಕಮಾಂಡ್ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಮುಂಚೆ 2009 ಮತ್ತು 2014ರಲ್ಲಿ ಸ್ಪರ್ಧಿಸಿದ್ದೆ. ಹೀಗಾಗಿ, ನನಗೂ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧ ಇದೆ ಎಂದರು.
ಯಾರೋ ಆಸ್ತಿ ಉಳಿಸಿಕೊಳ್ಳೋಕೆ ಹಾಗೂ ಅಧಿಕಾರಕ್ಕೆ ಟಿಕೆಟ್ ಕೇಳಿದ್ರೆ ಯಾವ ಪಕ್ಷವೂ ಕೊಡಲ್ಲʼ ಎಂದು ಟಿಕೆಟ್ ಆಕಾಂಕ್ಷಿಯಾಗಿರುವ ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯಗೆ ಮೊಯ್ಲಿ ಟಾಂಗ್ ಕೊಟ್ಟರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮಗಳ ಬಗ್ಗೆ ನಿರಂತರ ದಂಗೆಗಳು ಎದ್ದಿದೆ. ಇದು ಹಿಂದೂ ಧರ್ಮ, ಕ್ರೈಸ್ತ, ಮುಸ್ಲಿಂ, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಸಹಜ ನಡೆಯುತ್ತಿರುವ ವಿಷಯ ಎಂದರು.
ಶಂಕರಾಚಾರ್ಯರು, ಮಧ್ವಾಚಾರ್ಯರು, ಬಸವೇಶ್ವರರು ದಂಗೆ ಎದ್ದಿದ್ದಕ್ಕೆ ಹೊಸ ಧರ್ಮಗಳು ಹುಟ್ಟಿವೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನೀಡಿರುವ ಹಕ್ಕು. ಈ ಹಕ್ಕಿನಡಿ ಸ್ಟಾಲಿನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.