Monday, March 27, 2023
spot_img
- Advertisement -spot_img

ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ದಂಡು

ಹುಬ್ಬಳ್ಳಿ: 2023ರ ವಿಧಾನಸಭೆ ಚುನಾವಣೆಗೆ ‌ ಇನ್ನೂ ನಾಲ್ಕೈದು ತಿಂಗಳು ಬಾಕಿ ಇದ್ದು, ಆಗಲೇ ಬಿಜೆಪಿಯಲ್ಲಿ ಟಿಕೆಟ್​ ಫೈಟ್ ಶುರುವಾಗಿದೆ. ಇದಕ್ಕೆ ಪೂರಕವೆಂಬಂತೆ ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ದಂಡು ಆಗಮಿಸಿದೆ. ಅದರಲ್ಲೂ ಹೆಚ್ಚಾಗಿ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಿಂದ ಮುಖಂಡರು ಬಂದಿದ್ದು, ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ.

ಈ ಬಾರಿ ಬಿಜೆಪಿ ಗೆದ್ದಿರೋ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಪ್ಲ್ಯಾನ್ ರೂಪಿಸಲಾಗಿದ್ದು, ಹಲವರಿಗೆ ಟಿಕೆಟ್​ ಕೈತಪ್ಪು ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಿಕೆಟ್ ಆಕಾಂಕ್ಷಿಗಳ ದಂಡು ಆಗಮಿಸಿದ್ದು, ಟಿಕೆಟ್​ಗಾಗಿ ಲಾಬಿ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಟಿಕೆಟ್​​ ಹಂಚಿಕೆ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಪ್ಲ್ಯಾನ್ ರೂಪಿಸಲಾಗಿದ್ದು, ಬಿಜೆಪಿ ಭದ್ರ ಕೋಟೆಯಂತಿರುವ ಕ್ಷೇತ್ರಗಳಲ್ಲಿ ಈ ಪ್ಲ್ಯಾನ್ ಮಾಡಿದ್ದಾರಂತೆ.

ಹೈಕಮಾಂಡ್​ ಜೊತೆ ಪ್ರಹ್ಲಾದ್ ಜೋಶಿ ಉತ್ತಮ ಸಂಪರ್ಕ ಹೊಂದಿದ್ದಾರೆ. ಇದರಿಂದ ಇವರ ಮುಖಾಂತರ ಹೋದರೆ ಟಿಕೆಟ್​ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿ, ಗುರುಮಿಠಕಲ್, ಗಂಗಾವತಿ, ರೋಣ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಆಗಮಿಸಿರುವ ಮುಖಂಡರು ಟಿಕೆಟ್​ಗಾಗಿ ಲಾಬಿ ನಡೆಸಿದ್ದಾರೆ.

Related Articles

- Advertisement -

Latest Articles